ಮಂಡ್ಯ : ಅರೆಬಟ್ಟೆಯಲ್ಲಿ ಮಹಿಳೆಯರ ಓಡಾಟ : ಸಾರ್ವಜನಿಕರಿಂದ ವ್ಯಕ್ತವಾಯ್ತು ಆಕ್ರೋಶ

ಮಂಡ್ಯ : ಬಸ್‌ ನಿಲ್ದಾಣದಲ್ಲಿ ಅರೆನಗ್ನವಾಗಿ ಓಡಾಡುತ್ತಿದ್ದ ಮಹಿಳೆಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ  ಮಂಡ್ಯದಲ್ಲಿ ನಡೆದಿದೆ.

ಮದ್ದೂರಿನಲ್ಲಿ ಮಹಿಳೆಯರು ಅರೆ ನಗ್ನವಾಗಿ ಓಡಾಡುತ್ತಿದ್ದರು. ಇದನ್ನು ನೋಡಿದ ಸಾರ್ವಜನಿಕರು ಮಹಿಳೆಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮದ್ದೂರು ಪೊಲೀಸರು, ಮಹಿಳೆಯರಿಗೆ ಬಟ್ಟೆ ಹಾಕಿಕೊಳ್ಳುವಂತೆ ಬುದ್ಧಿ ಹೇಳಿದ್ದಾರೆ. ಅಲ್ಲದೇ ಸಭ್ಯವಾಗಿ ವರ್ತಿಸುವಂತೆ ಬುದ್ದಿಮಾತು ಹೇಳಿದ್ದಾರೆ.

ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇವರನ್ನು ಮಕ್ಕಳ ಕಳ್ಳಿಯರಿರಬಹುದು ಎಂದು ಹೇಳಲಾಗುತ್ತಿದ್ದು, ವಿಚಾರಣೆ ಬಳಿಕವೇ ಸತ್ಯಾಸತ್ಯತೆ ತಿಳಿಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com