ಏನು…ಆ ಡಿ.ಕೆ ಶಿವಕುಮಾರ್ ದೊಡ್ಡಮನುಷ್ಯನಾ….ಕಾನೂನಿಗಿಂತಲೂ ದೊಡ್ಡವರಾ …? : ಶ್ರೀರಾಮುಲು ಪ್ರಶ್ನೆ

ಕೊಪ್ಪಳ : ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ ವಿಚಾರ ಸಂಬಂಧ ಕಾಂಗ್ರೆಸ್ ನವರಿಗೆ ಇವತ್ತು ಹೊಟ್ಟೆ ನೋವು ಬಂದಿದೆ ಎಂದು ಸಂಸದ ಶ್ರೀರಾಮುಲು ಆರೋಪಿಸಿದ್ದಾರೆ.  ಯುಪಿಎ ಸರ್ಕಾರ ಇದ್ದಾಗಲೂ ಬಿಜೆಪಿ ನಾಯಕರ ಮೇಲೆ ದಾಳಿ ನಡೆದಿತ್ತು. ಆಗ ಕಾನೂನು ಮಾತನಾಡೋರು ಈಗ ಯಾಕೆ ಮಾತು ಬದಲಾಯಿಸಿದ್ದಾರೆ. ದಾಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.  ಡಿ.ಕೆ ಶಿವಕುಮಾರ್ ಒಬ್ಬ ದೊಡ್ಡಮನುಷ್ಯನಾ.. ಕಾನೂನುಗಿಂತ ಅವರೇನು ದೊಡ್ಡವರಾ..? ಎಂದು ಪ್ರಶ್ನಿಸಿದ್ದಾರೆ.

ಯಾರ ಮೇಲೋ ದಾಳಿ ಮಾಡಿದ್ರೆ, ಕುಂಬಳಕಾಯಿ ಕಳ್ಳನ ತರಹ ಡಿಕೆಶಿ ಯಾಕೆ ಮಾಡ್ತಾರೆ. ಅವರು ತಪ್ಪು ಮಾಡಿದ್ದಾರೆ. ಅದಕ್ಕೆ ಮೊದಲು ಬಂದು ಪ್ರೆಸ್ ಮೀಟ್ ಮಾಡಿ ಸುಳ್ಳು ಸುದ್ದಿ ಹಬ್ಬಿಸ್ತಾರೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಳ್ಳಲಿ. ನಮಗೆ ಏನು ಸಮಸ್ಯೆ ಆಗಲ್ಲ. ಮೋದಿಯವರೇ ಅಧಿಕಾರಕ್ಕೆ ಬರ್ತಾರೆ. ಉಪಚುನಾವಣೆ ಬಿಜೆಪಿಗೆ ಯಾವುದೇ ದಿಕ್ಸೂಚಿ ಆಗಲ್ಲ. ಉಪಚುನಾವಣೆಯಿಂದ ಬಿಜೆಪಿಗೆ ಏನು ಆಗಿಲ್ಲ. 2019 ರಲ್ಲಿಯೂ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಮಂತ್ರಿಯಾಗ್ತಾರೆ. ತೃತೀಯರಂಗ , ಸಮ್ಮಿಶ್ರ ಸರ್ಕಾರದಲ್ಲಿ ಅವಕಾಶವಾದಿಗಳು ಇರ್ತಾರೆ. ಸಣ್ಣ ಪುಟ್ಟ ವ್ಯತ್ಯಾಸ ಇದ್ರೆ ಅಲ್ಲಿ ಇರುವವರು ಬೇರೆ ಕಡೆ ಜಂಪ್ ಆಗುತ್ತಾರೆ.  ಆದ್ದರಿಂದ ತೃತೀಯರಂಗ ಮೋದಿಯನ್ನು ಏನೂ ಮಾಡೋಕೆ ಆಗಲ್ಲ. ಸಿಎಂ ಕುಮಾರಸ್ವಾಮಿ ರೈತರನ್ನು ಕರೆದು ನಾಟಕ ಮಾಡೋದು ಬೇಡ. ಮೊದಲು ಸಾಲಮನ್ನಾ ಮಾಡಿ ಮಾತು ಉಳಿಸಿಕೊಳ್ಳಲಿ. ಸಿಎಂ ಕುಮಾರಸ್ವಾಮಿರವರು 15 ದಿನ ಅಲ್ಲ‌ ಒಂದು ತಿಂಗಳು ಟೈಮ್ ತೆಗೆದುಕೊಳ್ಳಲಿ. ಮೊದಲು ಸಾಲಮನ್ನಾ ಮಾಡಲಿ ಎಂದಿದ್ದಾರೆ.

ನಮ್ಮ‌ ಸರ್ಕಾರ ಇದ್ದಿದ್ರೆ ನಾವು ಎಲ್ಲಾ ತರಹದ ಕೆಲಸ ಮಾಡುತ್ತಿದ್ದೆವು. ಆದ್ರೆ ನಮ್ಮ‌ಸರ್ಕಾರ ರಾಜ್ಯದಲ್ಲಿ ಇಲ್ಲ  ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com