WATCH : ತಮ್ಮ ಪುಟ್ಟ ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ಕಿಚ್ಚ ಸುದೀಪ್‌…….

ಕಿಚ್ಚ ಸುದೀಪ್‌ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚೇ ಇದೆ. ಅವರ ನೇರ ನುಡಿ, ನಡೆ, ಅಭಿಮಾನಿಗಳ ಮೇಲಿಟ್ಟಿರುವ ಪ್ರೀತಿ ಏನೆಂಬುದು ಎಲ್ಲರಿಗೂ ತಿಳಿದೇ ಇದೆ.

ಅನೇಕ ಬಾರಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಕೊನೆಯ  ಆಸೆಯನ್ನೂ ನೆರವೇರಿಸಿದ್ದಾರೆ. ಚಿಕ್ಕವರಿಂದ ವಯಸ್ಸಾದವರವರೆಗೂ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್‌ ತಮ್ಮ ಪುಟ್ಟ ಅಭಿಮಾನಿಯೊಬ್ಬನನ್ನು ಭೇಟಿಯಾಗಿ ಆತನ ಆಸೆಯನ್ನು ಈಡೇರಿಸಿದ್ದಾರೆ.

ಕಿಚ್ಚನ ಪುಟ್ಟ ಅಭಿಮಾನಿಯ ಹೆಸರು ಅಭಿಷೇಕ್‌, ಈ ಬಾಲಕನಿಗೆ ಸ್ನಾಯು ಕ್ಯಾನ್ಸರ್ ಇದ್ದು, ಆತ ಸಾಯುವ ಮುನ್ನ ಕಿಚ್ಚನನ್ನು ನೋಡಬೇಕೆಂಬ ಆಸೆ ಹೊಂದಿದ್ದನಂತೆ. ಕಿಚ್ಚನ ಅಭಿಮಾನಿಗಳು ಈ ವಿಚಾರವನ್ನು ಸುದೀಪ್ ಅವರಿಗೆ ತಿಳಿಸಿದ್ದು, ಕೂಡಲೆ ಕಿಚ್ಚ ಅಭಿಷೇಕ್‌ನನ್ನು ಭೇಟಿಯಾಗಿದ್ದಾರೆ. ಆ ಬಾಲಕ ಹಾಗೂ ಆತನ ಮನೆಯವರನ್ನು ಸುದೀಪ್‌ ತಮ್ಮ ಮನೆಗೆ ಕರೆಸಿಕೊಂಡು, ಆತನ ಜೊತೆ ಸಮಯ ಕಳೆದಿದ್ದಲ್ಲದೆ, ಆತನ ಪೋಷಕರಿಗೆ ಧೈರ್ಯ ತುಂಬಿ ಕಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com