ಜೂನ್‌ನಿಂದ ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ…..ಆ ರಾಶಿ ನಿಮ್ಮದೂ ಇರಬಹುದು ನೋಡಿ…!

ಜೂನ್‌ನ ಮಳೆಗಾಲ ಪ್ರಾರಂಭವಾಗಿದೆ.  ಇದೇ ಜೂನ್‌ನಿಂದ ಕೆಲವು ರಾಶಿಯಲ್ಲಿ ಸ್ಥಾನಪಲ್ಲಟವಾಗಲಿದ್ದು, ಅದೃಷ್ಟ ಖುಲಾಯಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.

ಈ ತಿಂಗಳಿನಿಂದ ನಿಮ್ಮ ರಾಶಿಯ ಮೇಲೆ ಯಾವುದ ಶನಿದೋಷವಿದ್ದರೂ ಅದು ಪರಿಹಾರವಾಗುತ್ತದೆ. ಅಲ್ಲದೆ ಇಷ್ಟುದಿನ ಪಟ್ಟ ಕಷ್ಟಗಳೆಲ್ಲ ಪರಿಹಾರವಾಗುತ್ತವೆ. ಹಾಗಾದರೆ ಯಾವ ಯಾಶಿಯವರ ಬಗ್ಗೆ ನಾವು ಹೇಳುತ್ತಿದ್ದೇವೆ ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.

ಸಿಂಹ ರಾಶಿ : ಈ ರಾಶಿಯವರಿಗೆ ಈ ತಿಂಗಳಿಂದ ಅದೃಷ್ಟ ಒಲಿದು ಬರುತ್ತದೆ, ಇನ್ನು ಇವರ ನಿರೀಕ್ಷೆಗೂ ಮೀರಿ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗುತ್ತದೆ. ಈ ರಾಶಿಯವರಿಗೆ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತದೆ, ಇನ್ನು ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಈ ತಿಂಗಳು ಒಳ್ಳೆಯ ಲಾಭವಿದೆ.ಇನ್ನು ಕೌಟುಂಬಿಕ ವಿಚಾರದಲ್ಲಿ ಈ ರಾಶಿಯವರು ತುಂಬಾ ಖುಷಿಕರವಾದ ಜೀವನ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ತುಲಾ ರಾಶಿ : ತುಲಾ ರಾಶಿಯವರಿಗೆ ಈ ತಿಂಗಳಿಂದ ವಿದ್ಯಾಲಕ್ಷ್ಮಿಯ ಕೃಪಾಕಟಾಕ್ಷ ಸಿಗುತ್ತದೆ. ದೇವಿ ಸರಸ್ವತಿಯ ಸಂಪೂರ್ಣ ಅನುಗ್ರಹ ಈ ರಾಶಿಯವರಿಗೆ ಸಿಗುತ್ತದೆ. ಹಾಗಾಗಿ ಶಿಕ್ಷಣದ ವಿಚಾರದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಆದರೆ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿಯನ್ನ ವಹಿಸಬೇಕಾಗುತ್ತದೆ, ಸಣ್ಣ ಆರೋಗ್ಯದ ಸಮಸ್ಯೆ ಮುಂದೆ ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚು ಇದೆ. ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ ಈ ರಾಶಿಯವರಿಗೆ ಈ ತಿಂಗಳಲ್ಲಿ ಒಳ್ಳೆಯ ಧನ ಪ್ರಾಪ್ತಿಯಾಗುತ್ತೆ . ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಶಾಂತಿ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ : ಈ ತಿಂಗಳಿಂದ ಈ ರಾಶಿಯವರಿಗೆ ಪ್ರತಿಯೊಂದು ದಿನ ತುಂಬಾ ಅದೃಷ್ಟದ ದಿನವೇ ಸರಿ. ಈ ರಾಶಿಯವರು ಉದ್ಯೋಗವನ್ನ ಹುಡುಕುತ್ತಿದ್ದರೆ, ಒಳ್ಳೆಯ ಉನ್ನತವಾದ ಹುದ್ದೆ ಸಿಗಲಿದೆ. ಸರಕಾರಿ ಕೆಲಸದ ಆಸೆಯಲ್ಲಿರುವವರಿಗೆ ಒಳ್ಳೆಯ ಸಿಹಿ ಸುದ್ದಿ ಸಿಗುವ ಸೂಚನೆ ಹೆಚ್ಚಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com