JDS-ಕಾಂಗ್ರೆಸ್ ಸರ್ಕಾರದ ಜಾತಕ ಕೂಡಿ ಬರಲ್ಲ, ಬಹಳ ದಿನ ಮುಂದುವರೆಯಲ್ಲ : ಸಿ.ಟಿ ರವಿ

ಕಲಬುರಗಿಯಲ್ಲಿ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ. ‘ ಜೆಡಿಎಸ್ ಕಾಂಗ್ರೆಸ್ ಸರ್ಕಾರದ ಜಾತಕ ಕೂಡಿಬರಲ್ಲ ಜೆಡಿಎಸ್ ಕಾಂಗ್ರೆಸ್ ನದ್ದು ಮದುವೆನೂ ಅಲ್ಲ ಲವ್ ಮ್ಯಾರೇಜು ಅಲ್ಲ ಅದು ಲಿವಿಂಗ್ ಟುಗೆದರ್ ಸಂಬಂಧ ಬಹಳ ದಿನ ಮುಂದುವರೆಯಲ್ಲ. ಲಿವಿಂಗ್ ಟುಗೆದರ್ ಸರ್ಕಾರದಿಂದ ರಾಜ್ಯ ದುರಂತದೆಡೆಗೆ ಸಾಗತ್ತೆ ‘ ಎಂದಿದ್ದಾರೆ.

‘ ಜೆಡಿಎಸ್ ಹಸಿದಿದ್ದು ಕಾಂಗ್ರೆಸ್ ಹಳಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಅವ್ಯವಹಾರ ಬಯಲಾಗತ್ತೆ ಅಂತ ಜೆಡಿಎಸ್ ಜೊತೆ ಲಿವಿಂಗ್ ಟುಗೇದರ್ ಸಂಬಂಧ ಬೆಳೆಸಿದೆ. ಕಾಂಗ್ರೆಸ್ ನಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಅನೇಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಅದು ಸ್ಪೋಟಗೊಳ್ಳತ್ತೆ ‘ ಎಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ

Leave a Reply

Your email address will not be published.

Social Media Auto Publish Powered By : XYZScripts.com