ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಮಾಜಿ ಶಾಸಕ ಕೋನರೆಡ್ಡಿ ಸಹೋದರ ಸಾವು

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಶನಿವಾರ ಸಂಜೆ ಸಿಡಿಲು ಬಡಿದು ಜೆಡಿಎಸ್‌ ಮಾಜಿ ಶಾಸಕ ಎನ್‌.ಎಚ್‌  ಕೋನರೆಡ್ಡಿ ಅವರ ಸಹೋದರ ಮೃತಪಟ್ಟಿದ್ದಾರೆ.

ಕೋನರೆಡ್ಡಿ ಅವರ ಸಹೋದರ ಯೆಂಕಣ್ಣ ಕೋನರೆಡ್ಡಿ  (48) ಅವರು ನವಲಗುಂದದ ಚಿಲಕವಾಡ ಗ್ರಾಮದ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com