ಗಂಡ ಹೆಂಡತಿಯ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಯುವಕ….ಬಳಿಕ ಆಗಿದ್ದೇನು ?

ಬೆಳಗಾವಿ : ಬೆಡ್ ರೂಮ್ ನಲ್ಲಿದ್ದ ಗಂಡ ಹೆಂಡತಿಯ ವಿಡಿಯೋ ಮಾಡಲು ಹೋಗಿ ಯುವಕನೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.

ಒಂದು ತಿಂಗಳ ಹಿಂದೆಯಷ್ಟೇ ದಂಪತಿ ಮದುವೆಯಾಗಿದ್ದು, ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅದೇ ಮನೆಯ ಪಕ್ಕದಲ್ಲಿ  ಸುನೀಲ್ ವಡ್ಡರ ಎಂಬಾತನಿಂದ ವಾಸಿಸುತ್ತಿದ್ದು, ಗಂಡ ಹೆಂಡತಿಯ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್‌ಗೆ ತಂತಿ ಕಟ್ಟಿ ಕಿಟಕಿಯಲ್ಲಿ  ಮೊಬೈಲ್ ಇಟ್ಟು ರೆಕಾರ್ಡ್ ಮಾಡುತ್ತಿದ್ದ.

ನಿನ್ನೆ ರೂಮಿನ ಬಳಿ ಸಪ್ಪಳವಾಗಿದ್ದನ್ನು ಗಮನಿಸಿದಾಗ ಮೊಬೈಲ್ ಇಟ್ಟಿರುವುದು ಬೆಳಕಿಗೆ ಬಂದಿದೆ.  ತಕ್ಷಣವೇ ಸುನೀಲ್ ತನ್ನ ಮೊಬೈಲ್ ನೀಡುವಂತೆ ಪರುಶರಾಮ್ ಗೆ ಕೇಳಿದ್ದಾನೆ. ಆದರೆ ಸಂಶಯಗೊಂಡ ಪರಶುರಾಂ ಸುನಿಲ್ಗೆ ಮೊಬೈಲ್‌ ನೀಡದೆ ಪೊಲೀಸ್‌ ಠಾಣೆಗೆ ಒಯ್ದಿದ್ದಾರೆ.

ಸದ್ಯ ಸುನಿಲ್‌ ವಿರುದ್ಧ ಪ್ರಕರಣ ದಾಖಲಾಗಿದ್ದು ನಾಪತ್ತೆಯಾಗಿರುವ ಸುನಿಲ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com