ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹೊಸ ಪ್ಲ್ಯಾನ್ ಮಾಡಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಆರ್ಥಿಕ ಮುಗ್ಗಟ್ಟನ್ನು ತಡೆಯಲು ಸಿಎಂ ಕುಮಾರಸ್ವಾಮಿ ನಿಗಮ ಮಂಡಳಿ ಹಾಗೂ ಸರ್ಕಾರದ ನಾನಾ ಇಲಾಖೆಗಳಲ್ಲಿ ಇನ್ನು ಮುಂದೆ ಕಾರು ಖರೀದಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

ನಿಗಮ ಮಂಡಳಿಗಳಲ್ಲಿ ಕಾರುಗಳ ಖರೀದಿಗೆ ನಿರ್ಬಂಧ ಹೇರಿದ ಸಿಎಂ, ಸಚಿವರ ಮನೆ, ಕೊಠಡಿ ನವೀಕರಣದ ಹೆಸರಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದು, ಮಿತಿಯೊಳಗೆ ನವೀಕರಿಸಲು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಸಿಎಂ ಬೆಂಗಾವಲು ಪಡೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳ ಬಳಕೆಗೆ ಕಡಿವಾಣ ಹಾಕಲು ಚಿಂತಿಸುತ್ತಿದ್ದಾರೆ. ಈ ಸಂಬಂಧ ಉನ್ನತ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಲಿರುವ ಸಿಎಂ, ರಾಜ್ಯದಿಂದ ಹೊರ ಹೋಗುವಾಗ ವಿಶೇಷ ವಿಮಾನ ಬಳಸದಂತೆಯೂ ನಿರ್ಧರಿಸಿದ್ದಾರೆ. ತುರ್ತು ಸಂಧರ್ಭದಲ್ಲಿ ಮಾತ್ರ ವಿಶೇಷ ವಿಮಾನ ಬಳಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.