sandalwood news : ಮೋದಿ ಸಹಸ್ರನಾಮ ಜಪ ಮಾಡುತ್ತಿರುವ ಅನಂತನಾಗ್‌ ….!

ದ್ಯಾಕೋ ಅನಂತಜ್ಜ ಇತ್ತಿತ್ತಲಾಗೆ ಮತ್ತೆ ರಾಜಕಾರಣ ಮಾತಾಡಲು ಶುರು ಮಾಡಿದ್ದಾರೆ. ಚರ್ಮ ಸುಕ್ಕುಗಟ್ಟಿದರೂ ಹೀರೋ ಅವತಾರಗಳಿಂದ ಹೊರಬರಲು ಹಿಂದೇಟು ಹಾಕುವ ಸ್ಟಾರ್‌ಡಂ ನಟರ ನಡುವೆ ತನ್ನ ವಯಸ್ಸಿಗೆ ತಕ್ಕಂತ, ವ್ಯಕ್ತಿತ್ವಕ್ಕೆ ಒಗ್ಗುವಂತಹ ಪಾತ್ರಗಳಿಗೆ ಸೈ ಎನ್ನುತ್ತಾ, ಹೊಸಬರ ಆಕ್ಷನ್-ಕಟ್‌ಗಳಿಗೆ ಮುಲಾಜುಗಳನ್ನು ಬದಿಗಿರಿಸಿ ನಟಿಸುತ್ತಿರುವ ಅನಂತನಾಗ್‌ರವರು ಒಂದು ಕಾಲಕ್ಕೆ ರಾಜಕಾರಣಿಯಾಗಿಯೂ ಸೈ ಅನಿಸಿಕೊಂಡವರು.

ಜನತಾ ದಳ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದವರು. ಒಂದಷ್ಟು ಓದು, ಪ್ರಗತಿಪರರ ನಡುವಿನ ಒಡನಾಟ, ಬರಹಾ ಕೌಶಲ್ಯ, ಸಿಕ್ಕಾಪಟ್ಟೆ ಕುಡಿತದ ಚಟವಿದ್ದಾಗ್ಯೂ ಅವರು ರಾಜಕಾರಣಿಯಾಗಿ ತಮ್ಮ ಛಾಪು ಮೂಡಿಸುವಲ್ಲಿ ಅಷ್ಟೊಂದು ಯಶ ಕಾಣಲಿಲ್ಲ. ಹಾಗಾಗಿ ಬಹುಬೇಗನೇ ಅವರ ಖಾದಿ ಬದುಕು ಆವಿಯಾಗಿ ಹೋಯ್ತು. ಆದರೂ ಒಂಚೂರು ಸೆನ್ಸಿಬಲ್ ಮನುಷ್ಯ ಎಂಬ ಇಮೇಜು ಉಳಿಸಿಕೊಂಡಿದ್ದರು.

ಆದರೆ ಇತ್ತೀಚೆಗೆ ಮಹಾತ್ಮ ಮೋದಿಯವರನ್ನು ಹೀನಾಮಾನ ಹೊಗಳಲು ಶುರು ಮಾಡಿ ತಮ್ಮ ಹಳೆಯ ಇಮೇಜನ್ನು ತಾವೇ ಅಪಹಾಸ್ಯ ಮಾಡಿಕೊಳ್ಳುತ್ತಿದ್ದಾರೆ. ಮೋದಿಯ ಆಡಳಿತ ಅತ್ಯುತ್ತಮವಾಗಿದೆ, ೧೩೦ ಕೋಟಿ ಜನಸಂಖ್ಯೆಯ ಭಾರತಕ್ಕೆ ಕನಿಷ್ಠ ೧೩ ಕೋಟಿ ಮೋದಿಯಂತ ನಾಯಕರು ಬೇಕು, ೧೯೭೦ರ ದಶಕದಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತದ ಚಿತ್ರಣವೇ ಬೇರೆ ಇರುತ್ತಿತ್ತು…. ಇವೆಲ್ಲಾ ಅನಂತಜ್ಜನ ಮೋದಿ ಸಹಸ್ರನಾಮದ ಸ್ಯಾಂಪಲ್‌ಗಳು! ಒಂದು ಕಾಲಕ್ಕೆ ಸೆನ್ಸಿಬಲ್ ಅನಿಸಿಕೊಂಡಿದ್ದ ಅನಂತಜ್ಜನಿಗೆ ಅದೇನಾಗಿದೆಯೋ ಗೊತ್ತಿಲ್ಲ, ಆದರೆ ಅವರು ಆದಷ್ಟು ಬೇಗ ‘ಹುಶಾರಾಗಿ’ ಬರಲಿ ಎಂಬುದಷ್ಟೇ ನಮ್ಮ ಆರೈಕೆ…

Leave a Reply

Your email address will not be published.

Social Media Auto Publish Powered By : XYZScripts.com