ಮಂಡ್ಯ : ಅನಂತ ಕುಮಾರ್ ವಿರುದ್ಧ ಪುಟಗೋಸಿ ಚಳುವಳಿಗೆ ಮುಂದಾದ ಯುವಕರ ತಂಡ

ಭಾರತೀಯ ಜನತಾ ಪಕ್ಷದ ಮುಖಂಡ ಅನಂತ್ ಕುಮಾರ್ ಹೆಗಡೆ ಜೆಡಿಎಸ್ ಪಕ್ಷವನ್ನು ಪುಟಗೋಸಿ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಎಚ್.ಡಿ ಕುಮಾರಸ್ವಾಮಿ ಮಾನ ಮುಚ್ಚಿಕೊಳ್ಳಲು ಪುಟಗೋಸೀನೇ ಬೇಕು ಎಂದಿದ್ದರು.

ಇದೀಗ ಮಂಡ್ಯದ ಯುವಕರ ತಂಡವೊಂದು ಅನಂತ್ ಕುಮಾರ್ ಹೆಗಡೆ ವಿರುದ್ಧ ನಾಳೆ ಪುಟಗೋಸಿ ಚಳವಳಿ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜೆಡಿಎಸ್‌ಗೆ ಪುಟಗೋಸಿ ಎಂದಿದ್ದಕ್ಕೆ ಅಪಾರ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪುಟಗೋಸಿ ಚಳವಳಿಗೆ ಕರೆ ನೀಡಿದ್ದಾರೆ.

ನಾಳೆ 100 ಕ್ಕೂ ಹೆಚ್ಚು ಪುಟಗೋಸಿ ಪೋಸ್ಟ್ ಮಾಡಲಿದೆ. ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ವಿನೂತನ ಚಳವಳಿಗೆ ಕರೆ ನೀಡಲಾಗಿದ್ದು, ಕರೆಗೆ ಜೆಡಿಎಸ್ ಅಭಿಮಾನಿಗಳು ಸ್ಪಂದಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com