ಪ್ರಚಾರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಅಷ್ಟೇ ಎಂದ ಕೇಂದ್ರ ಕೃಷಿ ಸಚಿವ…!!

ಭೋಪಾಲ್ : ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ಕೆಲವು ರೈತರು ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಮಧ್ಯ ಪ್ರದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಧಾ ಮೋಹನ್ ಸಿಂಗ್, ದೇಶದಾದ್ಯಂತ ಕೋಟಿಗಟ್ಟಲೆ ಜನ ರೈತರಿದ್ದರೂ ಅದರಲ್ಲಿ ಕೆಲವರಷ್ಟೇ ಬೀದಿಗಳಿದು ಸರಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅಂತಹ ಪ್ರತಿಭಟನೆಗಳಿಗೆ ಯಾವುದೇ ಉದ್ದೇಶ ಇರುವುದಿಲ್ಲ, ಅವರೆಲ್ಲ ಪ್ರಚಾರಕ್ಕಾಗಿ ಮಾತ್ರ ಪ್ರತಿಭಟನೆ ನಡೆಸುವುದು ಎಂದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಮಧ್ಯ ಪ್ರದೇಶದಲ್ಲಿ ತಮ್ಮ ಬೆಳೆಗೆ ಕಡಿಮೆ ಬೆಂಬಲ ಬೆಲೆ ನೀಡುತ್ತಿರುವುದರ ವಿರುದ್ಧ ಕಳೆದ ಜೂ.1 ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಹೊರ ರಾಜ್ಯಗಳಿಂದಲೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣ ವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com