ವಿವಿ ಪ್ಯಾಟ್‌ ರಶೀದಿ ಪತ್ತೆ ಪ್ರಕರಣ : ಚುನಾವಣಾಧಿಕಾರಿಯನ್ನು ಬಂಧಿಸಿದ ಪೊಲೀಸರು

ವಿಜಯಪುರ : ಉಕ್ಕಲಿಯಲ್ಲಿ ವಿವಿ ಪ್ಯಾಟ್ ರಶೀದಿ ಪತ್ತೆ ಪ್ರಕರಣ ಸಂಬಂಧ ಚುನಾವಣೆ ಅಧಿಕಾರಿ ರವೀಂದ್ರ ನಂದವಾಡಗಿಯವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅಧಿಕಾರಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದ ಉಕ್ಕಲಿ ಗ್ರಾಮದಲ್ಲಿ ಮೇ 27ರಂದು ವಿವಿ ಪ್ಯಾಟ್ ರಶೀದಿ ಪತ್ತೆಯಾಗಿತ್ತು. ಈ ಸಂಬಂಧ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸ್ಥಳೀಯ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ದೂರು ಕೂಡ ದಾಖಲಿಸಿದ್ದರು.

ರಶೀದಿಯನ್ನು ವಶಕ್ಕೆ ಪಡೆದು ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಬಳಿಕ ಮತಗಟ್ಟೆ ಅಧಿಕಾರಿ ರವೀಂದ್ರ ನಂದವಾಡಗಿ ಅವರನ್ನು ಬಂಧಿಸಿ ನಿನ್ನೆ ತಡರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ವಿಜಯನಗರ ಎಸ್‌ಪಿ ಪ್ರಕಾಶ್‌ ನಿಕ್ಕಂ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com