ತುಂಬಿ ಹರಿಯುತ್ತಿರುವ ಹಳ್ಳ : ಕೂದಲೆಳೆ ಅಂತರದಲ್ಲಿ ಪಾರಾದ ಚಾಲಕ : ಮೈ ಜುಮ್ಮೆನಿಸುವಂತಿದೆ ವಿಡಿಯೋ !

ಹುಬ್ಬಳ್ಳಿ : ತುಂಬಿ ಹರಿಯುವ ಸೇತುವೆ ನಡುವೆ ಟ್ರ್ಯಾಕ್ಟರ್ ಚಾಲಕನೊಬ್ಬ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗಿ ಕೂದಲು ಎಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಕುಂದಗೋಳ ಹಾಗೂ ಇಂಗಳಗಿ ನಡುವೆ ಸೇತುವೆಯಲ್ಲಿ ನಡೆದಿದೆ.
ಭಾರಿ ಮಳೆಗೆ ಸೇತುವೆ ತುಂಬಿ ಹರಿಯುತ್ತಿತ್ತು. ಆದರೆ ತುಂಬಿ ಹರಿಯುವ ಸೇತುವೆಯಲ್ಲಿಯೇ ಟ್ರ್ಯಾಕ್ಟರ್ ಚಾಲಕನೊಬ್ಬ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಸೇತುವೆ ಮಧ್ಯದಿಂದ ಟ್ರ್ಯಾಕ್ಟರ್ ಪಾಸ್ ಆಗಿದೆ.

ಆದ್ರೆ ಅಂತಿಮವಾಗಿ ರಸ್ತೆ ಮುಟ್ಟುವಷ್ಟರಲ್ಲಿ ಟ್ರ್ಯಾಕ್ಟರ್ ಮುಂದೆ ಹೋಗದೆ ನಿಂತಿದೆ.‌ ನೆರೆದ ಜನರು ಟ್ರ್ಯಾಕ್ಟರ್ ಹೋಯ್ತು ಎಂದು ಕೂಗಲಾರಂಭಿಸಿದ್ದಾರೆ. ಆದ್ರೆ ಟ್ರ್ಯಾಕ್ಟರ್ ಚಾಲಕ ಎದೆಗುಂದದೆ, ಧೈರ್ಯ ತಗೆದುಕೊಂಡು ಟ್ರ್ಯಾಕ್ಟರ್ ದಡ ಸೇರಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com