ಚಿಕ್ಕೋಡಿ : ಧರ್ಮ ಆಧಾರಿಸಿ ಮಕ್ಕಳ ವಿಂಗಡಣೆ : ಪ್ರತಿಷ್ಠಿತ ಶಾಲೆಯಲ್ಲಿ ಜಾತಿವಾದ ಬಿತ್ತುವ ಯತ್ನ.?

ನಾವೆಲ್ಲ ಒಂದು ನಾವೆಲ್ಲ ಭಾರತೀಯರೂ ಅಂತ ಪುಟ್ಟ ಕಂದಮ್ಮಗಳಿಗೆ ಅನೇಕತೆಯಲ್ಲಿ ಏಕತೆಯನ್ನು ಕಲಿಸಬೇಕಾದ ಶಾಲೆಯೊಂದು ಅವರಲ್ಲಿ ಜಾತಿವಾದ ಬಿತ್ತುವ ಪ್ರಯತ್ನ ಮಾಡಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಇರುವ ಸೆಂಟ ಪ್ರಾನ್ಸಿಸ್ ಆಸಿಸ್ ಶಾಲೆಯಲ್ಲಿ ನೋಟಿಸ್ ಬೋರ್ಡಿನಲ್ಲಿ ಹಿಂದು ಮುಸ್ಲಿಮ್ ಕ್ರಿಶ್ಚಿಯನ್ ಮತ್ತು ಜೈನ್ ಎಂದು ಬರೆಯಲಾಗಿದ್ದು ಆಯಾ ತರಗತಿಗಳಲ್ಲಿ ಓದುತ್ತಿರುವ ಮಕ್ಕಳ ಜಾತಿ ಆಧಾರಿತ ಲೆಕ್ಕಾಚಾರವನ್ನು ಈ ಶಾಲೆಯ ನೋಟಿಸ್ ಬೋರ್ಡಿನಲ್ಲಿ ಬರೆಯಲಾಗುತ್ತಿದೆ. ಇದರಿಂದಾಗಿ ಕ್ರೈಸ್ತ ಮಿಷನರಿಗೆ ಸೇರಿದ ಶಾಲೆಗಳಲ್ಲಿ ಜಾತಿವಾದ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪಗಳು ಕೇಳಿ ಬಂದಿದ್ದು ಈ ಬಗ್ಗೆ ಶಾಲೆಯನೋಟೀಸ್ ಬೋರ್ಡಿನಲ್ಲಿ ಆಯಾ ಧರ್ಮಗಳ ಹೆಸರು ಬರೆದಿರುವದು ಕಂಡು ಬಂದಿದೆ.

ಇನ್ನೂ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಚಿಕ್ಕೋಡಿ ಪಟ್ಟಣದ ಸೆಂಟ್ ಪ್ರಾನ್ಸಿಸ್ ಆಸಿಸ್ ಶಾಲೆಗೆ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಪತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೀಗೆ ಮಾಡಬೇಡಿ ಎಂದು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಇನ್ನೂ ಘಟನೆಯ ಬಗ್ಗೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಷ ವ್ಯಕ್ತವಾಗಿದ್ದು ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ನಾವೆಲ್ಲ ಶಾಲೆಗಳಲ್ಲಿ ಭಾರತೀಯರೆಲ್ಲ ಒಂದೇ ತಾಯಿಯ ಮಕ್ಕಳು ಎಂದು ಹೇಳಬೇಕು ಆದರೆ ಹೀಗೆ ಸಾರ್ವಜನಿಕವಾಗಿ ಜಾತಿಯನ್ನು ಎತ್ತಿ ತೋರಿಸಿ ಮುಗ್ದ ಮಕ್ಕಳಲ್ಲಿ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ ಅಷ್ಟೆ ಅಲ್ಲದೇ ಶಾಲೆಯಲ್ಲಿ ಶಿಕ್ಷಣ ಕಲಿಸುವ ಬದಲು ಜಾತಿಯತೆ ಬಿತ್ತುತಿರುವ ಬಗ್ಗೆ ಅನೇಕ ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ತಹಶಿಲ್ದಾರರಿಗೆಮನವಿ ಸಲ್ಲಿಸುವದಾಗಿ ಆರ್ ಎಸ್ ಎಸ್ ಮುಖಂಡ ಸಂಜಯ ಅಡಕೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೋಡಿಯಲ್ಲಿ ಖಾಸಗೀ ಶಾಲೆಗಳು ಹೀಗೆ ಮನಸ್ಸಿಗೆ ಬಂದಂತೆ ಮಾಡುತ್ತಿದ್ದು ಏನೂ ಅರಿಯದ ಮುಗ್ದ ಕಂದಮ್ಮಗಳಿಗೂ ಅವರ ಧರ್ಮದ ಆಧಾರಿತ ವಿಂಗಡನೆ ಮಾಡುತ್ತಿರುವದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಸದ್ಯ ಜನರಲ್ಲಿ ಮನೆ ಮಾಡಿದೆ. ಇನ್ನಾದರೂ ಇಂತಹ ಘಟನೆಗಳು ಮರುಕಳಿಸದಂತೆ ಖಾಸಗೀ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಶಿಕ್ಷಣ ಇಲಾಖೆ ನೀಡುತ್ತಾ. ದೇಶ ಭಕ್ತಿಯ ಜೊತೆಗೆ ಅನೇಕತೆಯಲ್ಲಿ ಏಕತೆಯನ್ನು ಸಾರುವಲ್ಲಿ ಖಾಸಗೀ ಅಂಗ್ಲ ಮಾಧ್ಯಮ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಾ ಅಂತ ಕಾಯ್ದು ನೋಡಬೇಕಿದೆ.

Leave a Reply

Your email address will not be published.

Social Media Auto Publish Powered By : XYZScripts.com