ಮೋದಿ ಹೆಸರು ಹೇಳ್ಕೊಂಡು ಅಧಿಕಾರಕ್ಕೆ ಬಂದಿದ್ದೇವೆ. ಆದರೆ ಜನರಿಗಾಗಿ ಏನೂ ಮಾಡಿಲ್ಲ ಎಂದ ಬಿಜೆಪಿ ನಾಯಕ !

ಲಖನೌ : ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ನಾವು ಅಧಿಕಾರಕ್ಕೆ ಬಂದರೂ ಜನರಿಗಾಗಿ ಏನೂ ಕೆಲಸ ಮಾಡಿಲ್ಲ. ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅಧಿಕಾರಿಗಳು ಹಗರಣದಲ್ಲಿ ತೊಡಗಿದ್ದಾರೆ. ಉಪ ಚುನಾವಣೆಗಳಲ್ಲಿ ನಮ್ಮ ಸೋಲಿಗೆ ಇದೇ ಕಾರಣ ಎಂದು ಬಿಜೆಪಿ ಶಾಸಕ ಶ್ಯಾಮ್ ಪ್ರಕಾಶ್ ಹೇಳಿದ್ದಾರೆ.

ಕೈರಾನಾ ಲೋಕಸಭಾ ಕ್ಷೇತ್ರ ಮತ್ತು ನೂಪುರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಸೋಲಿನ ಬಳಿಕ ಶ್ಯಾಮ್ ಪ್ರಕಾಶ್, ಈ ಸಂಬಂಧ ಫೇಸ್ ಬುಕ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ಅಲ್ಲದೆ ಈ ಪೋಸ್ಟ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಅಸಹಾಯಕತೆ ಬಗ್ಗೆಯೂ ಹೇಳಿಕೊಂಡಿರುವ ಅವರು, ಮೋದಿ ಅವರ ಹೆಸರು ಹೇಳಿಕೊಂಡು ನಾವು ಅಧಿಕಾರಕ್ಕೆ ಬಂದರೂ ಜನರಿಗಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದ್ದೇವೆ. ಸರ್ಕಾರವನ್ನು ಸಂಘ ನಿಯಂತ್ರಣ ಮಾಡುತ್ತಿರುವುದರಿಂದ ಸಿಎಂ ಅಸಹಾಯಕರಾಗಿದ್ದಾರೆ. ಅಧಿಕಾರಿ ಮತ್ತು ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರೈಲು ಹಳಿಯಿಂದ ಇಳಿದು ಚಲಿಸುತ್ತಿದೆ. ಇನ್ನು ಕೊನೆಯ ಸಾಲುಗಳಲ್ಲಿ ಬುದ್ಧಿವಂತರಿಗೆ ಅರ್ಥ ಮಾಡಿಕೊಳ್ಳಲು ಸನ್ನೆ ಸಾಕು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com