ಬೈಕ್‌ ಹೊತ್ಕೊಂಡು ಹೋಗಿದ್ದಕ್ಕೆ ಪೊಲೀಸ್ ವಾಹನದ ಚಕ್ರದ ಕೆಳಗೆ ಮಲಗಿದ ಸವಾರ : ವಿಡಿಯೋ ವೈರಲ್‌

ಮೈಸೂರು : ಪೊಲೀಸರು ತಮ್ಮ ವಾಹನದಲ್ಲಿ ಬೈಕನ್ನು ತೆಗೆದುಕೊಂಡು ಹೋಗುತ್ತಿದ್ದುದನ್ನು ನೋಡಿ ಸಿಟ್ಟಿಗೆದ್ದ ಬೈಕ್ ಮಾಲೀಕ ಪೊಲೀಸರ ವಾಹನದಡಿ ಮಲಗಿದ ಸಂಗತಿ ಮೈಸೂರಿನಲ್ಲಿ ನಡೆದಿದೆ.

ನೋ ಪಾರ್ಕಿಂಗ್‌ ಎಂದು ಬೋರ್ಡ್‌ ಇರದ ಜಾಗದಲ್ಲಿ ಬೈಕ್‌ ಮಾಲೀಕ ತನ್ನ ಬೈಕನ್ನು ನಿಲ್ಲಿಸಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಬಂದ ಪೊಲೀಸರು ಬೈಕನ್ನು ತಮ್ಮ ಟೈಗರ್ ವಾಹನದ ಮೇಲೆ ಹಾಕಿಕೊಂಡಿದ್ದಾರೆ. ಇದನ್ನು ನೋಡಿ ಸಿಟ್ಟಿಗೆದ್ದ ಮಾಲೀಕ  ಪೊಲೀಸ್ ವಾಹನದ ಕೆರಳೆ ಮಲಗಿದ್ದಾರೆ. ಈ ವ್ಯಕ್ತಿಯ ವರ್ತನೆ ಕಂಡು ಪೊಲೀಸರು ದಂಗಾಗಿದ್ದು, ಕೊನೆಗೆ ಟೈಗರ್ ವಾಹನದಿಂದ ಬೈಕನ್ನು ಕೆಳಗಿಳಿಸಿದ್ದಾರೆ.

ನೋ ಪಾರ್ಕಿಂಗ್ ಬೋರ್ಡ್ ಹಾಕದ ಜಾಗದಲ್ಲಿ ನಾನು ಬೈಕ್ ನಿಲ್ಲಿಸಿದ್ದೆ. ನೀವು ಬೋರ್ಡ್ ಹಾಕಿದ್ದರೆ ನಾನು ಬೈಕ್ ನಿಲ್ಲಿಸುತ್ತಿರಲಿಲ್ಲ ಎಂದು ಬೈಕ್ ಸವಾರ ಹೇಳಿದ್ದಾರೆ. ಹೀಗಾಗಿ ಪೊಲೀಸರು ಬೈಕನ್ನು ತಮ್ಮ ವಾಹನದಿಂದ ಕೆಳಗೆ ಇಳಿಸಿದ್ದು, ಸಾರ್ವಜನಿಕರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

Leave a Reply

Your email address will not be published.