ಇಂಡೋನೇಷ್ಯಾದಲ್ಲೂ ಮೋದಿ ಹವಾ : ಮೊಮ್ಮಗನಿಗೆ ನರೇಂದ್ರ ಎಂದು ಹೆಸರು ನಾಮಕರಣ ಮಾಡಿದ ಅಧ್ಯಕ್ಷ

ದೆಹಲಿ : ಪ್ರಧಾನಿ ಮೋದಿ ಇಂಡೋನೇಷ್ಯಾಗೆ ತೆರಳಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅಲ್ಲಿ ಭಾರತದ ಪ್ರಧಾನಿಯನ್ನು  ಸಂತನೆಂದು ಹಾಡಿ ಹೊಗಳಿರುವ ಇಂಡೋನೇಷ್ಯಾ ಅಧ್ಯಕ್ಷ ಜಾಕೋ ವಿಡೋಡೋ ತಮ್ಮ ಮೊಮ್ಮಗನಿಗೆ ನರೇಂದ್ರ ಎಂಬ ಹೆಸರಿಟ್ಟಿದ್ದಾರೆ.

2016ರಲ್ಲಿ ಜನಿಸಿದ ಹಿರಿಯ ಮಗ ಗಿಬ್ರನ್ ರಾಕಬೂಮಿಂಗ್ ಮಗನಿಗೆ ಜಾನ್‌ ಎಥೆಸ್‌ ಶ್ರೀ ನರೇಂದ್ರನೆಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷ ಜಾಕೋ ವಿಡೋಡೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯೋಜಿಸಿದ್ದ ಔತಣಕೂಟದ ವೇಳೆ ಖ್ಯಾತ ಗಾಯಕಿ ಫ್ರೈಡಾ ಲೂಸಿಯಾನಾ ‘ಸಾಬರಮತಿ ಕೇ ಸಂತ್‌’ ಎಂಬ ಹಿಂದಿ ಹಾಡನ್ನು ಹಾಡಿ ರಂಜಿಸಿದರು. ಮೋದಿಯವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಇಂಡೋನೇಷ್ಯಾಗೆ ಭೇಟಿ ನೀಡಿದ್ದು, ಅಲ್ಲಿ ಅಧ್ಯಕ್ಷರ ಅರಮನೆಯಲ್ಲಿ ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com