ಸಿದ್ದರಾಮಯ್ಯ ಚಾಲನೆ ನೀಡಿದ್ದ ಯೋಜನೆಯಿಂದ ಮೊದಲ ಬಾರಿ ಕೋಲಾರ ಕೆರೆಗೆ ಹರಿದ ನೀರು !

ಕೋಲಾರ : ಕೋರಮಂಗಲ ಚಲ್ಲಘಟ್ಟ (ಕೆ.ಸಿ ವ್ಯಾಲಿ) ಏತ ನೀರಾವರಿ ಯೋಜನೆಯಡಿ ನರಸಾಪುರ ಗ್ರಾಮಕ್ಕೆ ಮೊದಲ ಬಾರಿಗೆ ನೀರು ಬಿಡಲಾಗಿದೆ. ತಮ್ಮ ಗ್ರಾಮಕ್ಕೆ ಮೊಟ್ಟ ಮೊದಲ ಬಾರಿಗೆ ನೀರು ಬರುತ್ತಿರುವುದನ್ನು ನೋಡಲು  ಜನರು ಆಗಮಿಸುತ್ತಿದ್ದು, ಮಕ್ಕಳು ನೀರಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಜೂನ್ 7 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಿದ್ದು, ಈ ಹಿನ್ನೆಯಲ್ಲಿ ಲಕ್ಷ್ಮೀಪುರ ಕೆರೆಗೆ ನೀರು ಹರಿಸಲಾಗುತ್ತಿದೆ. ಮೊದಲ ಬಾರಿ ಕೊಳವೆ ಮೂಲಕ ನೀರು ಬರುತ್ತಿರುವುದನ್ನು ಗ್ರಾಮಸ್ಥರು ಹಾಗೂ ಮಕ್ಕಳು ಕುತೂಹಲದಿಂದ ವೀಕ್ಷಿಸಿದ್ದಾರೆ.

2016 ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೆ.ಸಿ.ವ್ಯಾಲಿ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. 12 ಸಾವಿರ ಕೋಟಿ ವೆಚ್ಚದಲ್ಲಿ ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸುವ ಯೋಜನೆಯ ಉದ್ದೇಶವಾಗಿದ್ದು, ಸ್ವತಂತ್ರ್ಯ ನಂತರ ಬಯಲು ಸೀಮೆ ಕೋಲಾರಕ್ಕೆ ಸಿಕ್ಕ ಮೊದಲ ನೀರಾವರಿ ಯೋಜನೆ ಇದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com