ಬಾಲಿವುಡ್ ನಟಿಯ ಜೊತೆ ರಾಹುಲ್ ಡೇಟಿಂಗ್..? : ಸ್ಪಷ್ಟನೆ ನೀಡಿದ ಕ್ರಿಕೆಟರ್ ಹೇಳಿದ್ದೇನು..?

ಟೀಮ್ ಇಂಡಿಯಾ ಕ್ರಿಕೆಟರ್ ಕೆ.ಎಲ್ ರಾಹುಲ್ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಅವರ ಜೊತೆ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದರು. ಅವರಿಬ್ಬರ ಫೋಟೊಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ನಿಧಿ ಅಗರ್ವಾಲ್ ಹಾಗೂ ಕೆ.ಎಲ್ ರಾಹುಲ್ ಡೇಟಿಂಗ್ ನಡೆಸಿದ್ದಾರೆ ಎಂಬ ಸುದ್ದಿಗಳೂ ಕೂಡ ರೆಕ್ಕೆ ಪಡೆದುಕೊಂಡವು.

Image result for rahul nidhi

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಹುಲ್ ನಿಧಿ ಅಗರ್ವಾಲ್ ಜೊತೆಗಿನ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದಾರೆ. ‘ ಒಬ್ಬ ಹುಡುಗ ಮತ್ತು ಹುಡುಗಿ ಸ್ನೇಹಿತರಾಗಿರಲು ಸಾಧ್ಯವಿಲ್ಲವೇ..? ನಾವಿಬ್ಬರು ಒಂದೇ ಊರಿನವರು. ನಾನು ಆಕೆಯನ್ನು ಹಲವು ದಿನಗಳಿಂದ ಬಲ್ಲೆ. ತನ್ನ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತಿರುವುದುನ್ನು ನೋಡಲು ಸಂತಸವಾಗುತ್ತದೆ ‘

Image result for rahul nidhi

‘ ನಾನು ಕ್ರಿಕೆಟರ್ ಆಗುವ ಮುನ್ನ, ಆಕೆ ನಟಿಯಾಗುವ ಮುಂಚೆಯಿಂದಲೂ ನಾವು ಪರಸ್ಪರರ ಪರಿಚಿತರು. ನಮ್ಮಿಬ್ಬರ ಮಧ್ಯೆ ಅಂತಹದೇನು ವಿಷೇಷವಿಲ್ಲ. ಒಂದು ವೇಳೆ ನಾನು ಯಾರನ್ನಾದರು ಇಷ್ಟ ಪಟ್ಟರೆ ಎಲ್ಲರಿಗೂ ತಿಳಿಸುತ್ತೇನೆ. ನಾನು ಪ್ರೀತಿಸುವ ಹುಡುಗಿಯನ್ನು ಪ್ರಿನ್ಸೆಸ್ ರೀತಿಯಲ್ಲಿ ನೋಡಿಕೊಳ್ಳುತ್ತೇನೆಯೇ ಹೊರತು ಮುಚ್ಚಿಡುವುದಿಲ್ಲ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com