15 ದಿನಗಳಲ್ಲಿ HDK ಸಾಲಮನ್ನಾ ಮಾಡದಿದ್ರೆ ರಾಜ್ಯ ಬಂದ್ ಮಾಡ್ತೀವಿ : ವಾಟಾಳ್ ನಾಗರಾಜ್

ಬೀದರ್ : ಮುಖ್ಯಮಂತ್ರಿ ಕುಮಾರಸ್ವಾಮಿಗೆ ವಾಟಾಳ್ ನಾಗಾರಾಜ್ ರೈತರ ಸಾಲಮನ್ನಾ ಮಾಡಲು 15 ದಿನಗಳ ಗಡುವು ನೀಡಿದ್ದಾರೆ. ‘ 15 ದಿನಗಳೊಳಗೆ ಮುಖ್ಯಮಂತ್ರಿ ಕುಮಾಸ್ವಾಮಿ ರೈತರ ಸಾಲಮನ್ನಾ ಮಾಡಬೇಕು. ಇಲ್ಲವಾದರೆ ರಾಜ್ಯವನ್ನ ಬಂದ್ ಮಾಡಲಾಗುವುದು ‘ ಎಂದು ಬೀದರ್ ಜಿಲ್ಲೆಯಲ್ಲಿ ವಾಟಾಳ್ ನಾಗಾರಾಜ್ ಹೇಳಿಕೆ ನೀಡಿದ್ದಾರೆ.

‘ 15 ದಿನದವರೆಗೆ ನಾವು ಕಾಯುತ್ತೇವೆ. ಒಂದು ವೇಳೆ ರೈತರ ಸಾಲಮನ್ನಾ ಮಾಡದೇ ಇದ್ದಲ್ಲಿ ರಾಜ್ಯ ಬಂದ್ ಮಾಡಲಾಗುವುದು ‘ ಎಂದು ಈಶಾನ್ಯ ಪದವೀದರ ಕ್ಷೇತ್ರದ ಪ್ರಚಾರಕ್ಕಾಗಿ ಆಗಮಿಸಿದ ವೇಳೆ ಹೇಳಿಕೆ ನೀಡಿದ್ದು, ಬೀದರ್ ನ ಈಶಾನ್ಯ ಪದವಿದರ ಕ್ಷೇತ್ರದಿಂದ ವಾಟಾಳ್ ನಾಗರಾಜ್ ಸ್ಪರ್ಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com