ನಮ್ಮ ಕಾರ್ಯಕರ್ತರನ್ನು ಟಚ್‌ ಮಾಡಿದ್ರೆ ಸರಿ ಇರಲ್ಲ : ಪ್ರತಾಪ್ ಸಿಂಹ ಆವಾಜ್‌

ಚಾಮರಾಜನಗರ : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಾಜ್ಯದಲ್ಲಿದೆ. ಈ ಬಾರಿ ನಮ್ಮ ಕಾರ್ಯಕರ್ತರನ್ನು ಟಚ್‌ ಮಾಡಿದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರತಾಪ್‌ ಸಿಂಹ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಅದನ್ನೇ ಹೇಳಿದ್ದೆ, ಈಗಲೂ ಅಷ್ಟೇ ಕುಮಾರಸ್ವಾಮಿ ಸರ್ಕಾರ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದಿದ್ದಾರೆ.

ನಾನು ಊರು ಕೇರಿ ಗೊತ್ತಿಲ್ಲದೇ ಮೈಸೂರಿಗೆ ಬಂದಾಗ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಇತ್ತು. ಒಂದು ಜೆಡಿಎಸ್ ಇತ್ತು. ಇಂತಹ ಒಂದು ಗ್ರಾಮ ಪಂಚಾಯತ್ ಇಲ್ಲದೆ ಇದ್ದ ಸಂದರ್ಭದಲ್ಲಿ ಬಂದು ಮೈಸೂರಿನಲ್ಲಿ ಗೆದ್ದು, 11,000 ಕೋಟಿ ಅನುದಾನ ತಂದಿದ್ದೇನೆ. ಮೈಸೂರು – ಬೆಂಗಳೂರು ಹೆದ್ದಾರಿಯಲ್ಲಿ 8 ಲೈನ್ ಹೈವೆ ಮಾಡಿಸುತ್ತಿದ್ದೇನೆ ಎಂದಿದ್ದಾರೆ.

ಮೈಸೂರಿನಲ್ಲಿರುವ ಇಎಸ್‍ಐ ಆಸ್ಪತ್ರೆಯನ್ನು 34 ಕೋಟಿಯಲ್ಲಿ ಸಂಪೂರ್ಣ ಮಾಡಿಸಿದ್ದೇನೆ. ಸೆಂಟ್ರಲ್ ರೋಡ್ ಫಂಡ್ ನಿಂದ ಮೈಸೂರಿಗೆ 202 ಕೋಟಿ ರೂ. ತಂದಿದ್ದೇನೆ. ಮೈಸೂರಿನ ಜನ ಇಷ್ಟು ಪ್ರೀತಿ ಕೊಟ್ಟು ಗೆಲ್ಲಿಸಿದ್ದಾರೆ. ಆದ್ದರಿಂದ ನಾನು ನಿಯತ್ತಿನಿಂದ ಕೆಲಸ ಮಾಡುತ್ತಿದ್ದೇನೆ. ನಾನು ಬೇರೆಯವರ ರೀತಿ ಆ ಪಕ್ಷ ಈ ಪಕ್ಷ ಹೋಗುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com