ದೇಶದ ಜನರ ಖಾತೆಗೆ 15 ಲಕ್ಷ ಹಾಕುವುದಾಗಿ ಮೋದಿ ಹೇಳಿರಲಿಲ್ಲ ಎಂದ ಬಿಜೆಪಿ ನಾಯಕ….?!!

ಬಳ್ಳಾರಿ : ಪ್ರತಿಯೊಬ್ಬ ಭಾರತೀಯನ ಖಾತೆಗೆ ಹದಿನೈದು ಲಕ್ಷ ಹಾಕುತ್ತೇವೆ ಎಂದು ಮೋದಿ ಎಲ್ಲಿಯೂ ಹೇಳಿಲ್ಲ. ಕಪ್ಪು ಹಣ ಬಂದರೆ  ಹದಿನೈದು ಲಕ್ಷದಷ್ಟು ಲಾಭವಾಗುತ್ತದೆ ಎಂದಿದ್ದರು ಎಂದು ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ.

ಪೇಜಾವರ ಶ್ರೀಗಳು ಪ್ರಧಾನಿ ಮೋದಿ ಅಭಿವೃದ್ಧಿ ಬಗ್ಗೆ ಅಸಮಾಧಾನ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ರವಿ, ಸರ್ಕಾರದ ಸಾಧನೆ ಜನರಿಗೆ ತಲುಪುತಿಲ್ಲ, ಅಪಪ್ರಚಾರ ಮಾತ್ರ ಜನರಿಗೆ ತಲುಪುತ್ತಿದೆ. ದೇಶದ ಎಲ್ಲ ವಿರೋಧ ಪಕ್ಷಗಳು ಒಂದಾಗಿವೆ. ಪೇಜಾವರ ಶ್ರೀಗಳಿಗೆ ಸರ್ಕಾರದ ಸಾಧನೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.

ಪೇಜಾವರ ಶ್ರೀಗಳು ಹತ್ತು ವರ್ಷದ ಯುಪಿಎ ಮತ್ತು ನಾಲ್ಕು ವರ್ಷದ ಎನ್ ಡಿಎ ಸರ್ಕಾರ ಹೊಂದಾಣಿಕೆ ಮಾಡಿ ನೋಡಬೇಕಿದೆ. ಲಲಿತ್ ಮೋದಿ, ‌ವಿಜಯ್ ಮಲ್ಯ ಸೇರಿದಂತೆ ಯಾರ ಮೇಲೂ‌ ಮೃದು ಧೋರಣೆ ಇಲ್ಲ. ಸಾಲ ಕೊಟ್ಟಿರೋದು ಕಾಂಗ್ರೆಸ್ ಸರ್ಕಾರ ಅದ್ರೆ ನಾವು ವಸೂಲಿ ಮಾಡುತ್ತಿರುವುದಾಗಿ ಹೇಳಿದ್ದಾರೆ.

 

One thought on “ದೇಶದ ಜನರ ಖಾತೆಗೆ 15 ಲಕ್ಷ ಹಾಕುವುದಾಗಿ ಮೋದಿ ಹೇಳಿರಲಿಲ್ಲ ಎಂದ ಬಿಜೆಪಿ ನಾಯಕ….?!!

Leave a Reply

Your email address will not be published.