ಕಾಂಗ್ರೆಸ್‌ ಹಳಸಿದವರ ಸರ್ಕಾರ, ಜೆಡಿಎಸ್‌ ಹಸಿದವರ ಸರ್ಕಾರ : ಸಿ.ಟಿ ರವಿ ವ್ಯಂಗ್ಯ

ಬಳ್ಳಾರಿ : ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿ ಪರ ಪ್ರಚಾರಕ್ಕೆ ಸಿಟಿ ರವಿ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಹೈದರಾಬಾದ್ ಕರ್ನಾಟಕ ಭಾಗದಲ್ಲಿರುವ ಆರು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ನನಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಇನ್ನೂ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿತ್ತು‌ ಅದು ಆಗಿಲ್ಲ ಎಂದಿದ್ದಾರೆ.

ವಿಜಯಪುರ, ಬಳ್ಳಾರಿ, ಬೆಂಗಳೂರಿನಲ್ಲಿ ಸ್ಥಾನಗಳನ್ನು ಕಳೆದುಕೊಂಡು ಬಹುಮತ ಪಡೆಯಲು ಆಗಲಿಲ್ಲ. ಇದೀಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ.  ಈ ಅಪವಿತ್ರ ಮೈತ್ರಿ ಬಹಳ ದಿನಗಳ ಕಾಲ ನಡೆಯುವುದಿಲ್ಲ. ಈ ಸರ್ಕಾರ ಹಳಸಿದವರ ಹಾಗೂ ಹಸಿದರವ ಸರ್ಕಾರ . ಹಳಸಿದವರು ಕಾಂಗ್ರೆಸ್ ನವರು, ಹಸಿದವರು ಜೆಡಿಎಸ್ ನವರು. ಇದೊಂದು ಲಿವಿಂಗ್ ಟು ಗೆದರ್ ಸರ್ಕಾರ ಎಂದು ವ್ಯಂಗವಾಡಿದ್ದಾರೆ.

ತಾಂತ್ರಿಕವಾಗಿ ಅಧಿಕಾರಕ್ಕೇರಿದ ಜೆಡಿಎಸ್, ಬಹಳ ದಿನಗಳ ಉಳಿಯಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಪಥದಲ್ಲಿ ಭಾರತ ಸಾಗುತ್ತಿದೆ. ನೋಟು ಅಮಾನ್ಯೀಕರಣದಿಂದಾಗಿ ತೆರಿಗೆಯ ವ್ಯಾಪ್ತಿ ಎರಡು ಪಟ್ಟು ಹೆಚ್ಚಾಯಿತು.ಜಿಎಸ್ಟಿ, ಆರ್ಥಿಕ ಮಟ್ಟದಲ್ಲಿ ಒಂದು ದೊಡ್ಡ ಕ್ರಾಂತಿ ಸೃಷ್ಠಿಸಿದೆ ಎಂದು ಮೋದಿ ಸರ್ಕಾರ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com