ರೇವಣ್ಣ, ಡಿಕೆಶಿ ಇಬ್ಬರಿಗೂ ಇಂಧನ ಖಾತೆ ಮೇಲೆ ಆಸಕ್ತಿ ಇದ್ದಿದ್ದು ನಿಜ ಎಂದ ಕುಮಾರಸ್ವಾಮಿ !

ಬೆಂಗಳೂರು :  ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೊಸ ಬಜೆಟ್ ಮಂಡನೆಯಾಗಬೇಕು. ಜಂಟಿ ಅಧಿವೇಶನ ಕರೆಯಬೇಕು.ಮೂರ್ನಾಲ್ಕು ದಿನಗಳಲ್ಲಿ ಬಜೆಟ್ ಸಿದ್ಧತಾ ಸಭೆ ನಡೆಸುತ್ತೇವೆ. ಪ್ರಣಾಳಿಕೆಯಲ್ಲಿ ಹೇಳಿದ್ದು, ಹಿಂದಿನ ಸರ್ಕಾರಗಳ ಯೋಜನೆ ಒಳಗೊಂಡಂತೆ ಬಜೆಟ್ ಸಿದ್ಧಪಡಿಸುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಇಂಧನ ಖಾತೆ ವಿಚಾರ ಸಂಬಂಧ ದೇವೇಗೌಡರು ಮಾಸ್ಟರ್ ಪ್ಲ್ಯಾನ್ ಮಾಡಿದ್ರು. ರೇವಣ್ಣ, ಡಿಕೆಶಿ ಜಟಾಪಟಿ ಸತ್ಯಕ್ಕೆ ದೂರವಾದ ಮಾತು. ಆದ್ರೆ ಇಬ್ಬರಿಗೂ ಇಂಧನ ಇಲಾಖೆ ಅಸಕ್ತಿ ಇದ್ದಿದ್ದು ನಿಜ.  ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ನೀತಿ ಅನ್ವಯವಾಗುತ್ತದೆ ಎಂದಿದ್ದಾರೆ.

ವೇಣುಗೋಪಾಲ್ ಖಾತೆ ಹಂಚಿಕೆ ಪಟ್ಟಿ ತೆಗೆದುಕೊಂಡು ದೇವೇಗೌಡರ ಜತೆ ಮಾತುಕತೆ ನಡೆಸಿದ್ರು. ಸಂಪುಟ ರಚನೆ ವಿಚಾರದಲ್ಲಿ ದೇವೇಗೌಡರು ಮೂಗು ತೂರಿಸಿಲ್ಲ. ರೇವಣ್ಣಗಾಗಿ ದೇವೇಗೌಡರು ಮಧ್ಯಪ್ರವೇಶ ಮಾಡಿದ್ದಾರೆ ಅನ್ನೋದು ಸುಳ್ಳು. ಕಾಂಗ್ರೆಸ್ ನ ಕೇಂದ್ರ ನಾಯಕರಿಗೂ ಈ ವಿಚಾರ ಗೊತ್ತಿದೆ. ಹಣಕಾಸು ಇಲಾಖೆ ಕೇಳಿದ್ದು ನಿಜ, ಆದ್ರೆ ಬೇರೆ ಖಾತೆ ವಿಚಾರದಲ್ಲಿ ಜಟಾಪಟಿ ಇಲ್ಲಜೆಡಿಎಸ್ ಒತ್ತಾಯದಿಂದ ಖಾತೆ ಪಡೆದಿಲ್ಲ ಎಂದಿದ್ದಾರೆ.

Leave a Reply

Your email address will not be published.