ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಈ ಬಾರಿ ಸ್ಥಾನವಿಲ್ಲ : ಪರಮೇಶ್ವರ್‌ ಘೋಷಣೆ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಜಿ. ಪರಮೇಶ್ವರ್‌ ಇಂದು ಕೊನೆಯ ಸಭೆ ನಡೆಸಿದ್ದು,  ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದಾರೆ.

2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್  ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಜೊತೆ ಸೇರಿ ಲೋಕಸಭೆ ಚುನಾವಣೆ ಎದುರಿಸುವ ಬಗೆ ಕುರಿತು ಚರ್ಚೆ ವೇಳೆ ಸೋಲಿನ ಕುರಿತು ವರದಿ ನೀಡುವಂತೆ ಪದಾದಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಸೋತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮುಖಂಡರಿಗೆ ಸೋಲಿನ ವರದಿ ಕೊಡುವಂತೆ ಸೂಚಿಸಲಾಗಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷ ಸಂಘಟನೆ ಸಮರ್ಥವಾಗಿ ಮಾಡಲು ಸೂಚಿಸಲಾಗಿದೆ. ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ದುಡಿದವರ ಪಟ್ಟಿ ಕೊಡುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಸಂಬಂಧ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆಯೂ ಚರ್ಚೆ ನಡೆಸಿದ್ದೇವೆ.
ಜೆಡಿಎಸ್ ಜೊತೆ ಕಾರ್ಯಕರ್ತರು ಹೊಂದಾಣಿಕೆಯಲ್ಲಿ ಹೋಗುವಂತೆ ಸಲಹೆ ನೀಡಿದ್ದೇವೆ. ಕುಮಾರಸ್ವಾಮಿ ಐದು ವರ್ಷ ಸಿಎಂ ಆಗುವ ಬಗ್ಗೆ ಹೈಕಮಾಂಡ್‌ ಹೇಳಿದೆ. ಹೈಕಮಾಂಡ್ ಮಾತನ್ನ ನಾವು ಕೇಳಬೇಕು. ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಈ ಬಾರಿ ಸ್ಥಾನವಿಲ್ಲ. ಈ ರೀತಿಯಾದ ಸಲಹೆಗಳು ಸಾಕಷ್ಟು ಬಂದಿವೆ. ಇದು ನನ್ನ‌ಗಮನಕ್ಕೂ ಬಂದಿದೆ. ಈ ಸಲಹೆಗಳನ್ಮ ಹೈಕಮಾಂಡ್ ಗೆ ಮುಟ್ಟಿಸಿದ್ದೇವೆ. ಅಂತಿಮ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಪರೋಕ್ಷವಾಗಿ ಹಿರಿಯರಿಗೆ ಸಚಿವ ಸ್ಥಾನವಿಲ್ಲವಿಲ್ಲವೆಂದಿದ್ದಾರೆ.

One thought on “ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಈ ಬಾರಿ ಸ್ಥಾನವಿಲ್ಲ : ಪರಮೇಶ್ವರ್‌ ಘೋಷಣೆ

Leave a Reply

Your email address will not be published.

Social Media Auto Publish Powered By : XYZScripts.com