ನೀವೂ ಬೇಡ…ನಿಮ್ಮ ಪಕ್ಷವೂ ಬೇಡ…ನಿಮ್ಮ ಸಹವಾಸವೇ ಬೇಡ : ಸ್ವಪಕ್ಷೀಯರ ವಿರುದ್ಧ ವೈಎಸ್‌ವಿ ದತ್ತಾ ಅಸಮಾಧಾನ

ಬೆಂಗಳೂರು : ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ  ಹೊರಹಾಕಿದ್ದಾರೆ.
ಜೆಡಿಎಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಬೇಸತ್ತಿರುವ ದತ್ತಾ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು, ಇನ್ನು ಮುಂದೆ ನೀವೂ ಬೇಡ,  ನಿಮ್ಮ ಪಕ್ಷವೂ ಬೇಡ, ನಿಮ್ಮ ಸಹವಾಸ ಸಾಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಾನು ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ನಿಮ್ಮ ಜೊತೆಯೇ ಇದ್ದೇನೆ. ಅಂದು ಹೆಗಡೆಯವರ ಜೊತೆ ಹೋಗದೆ ನಿಮ್ಮ ಬೆನ್ನಿಗೆ ನಿಂತಿದ್ದೆ . ಆದರೆ ನನ್ನನ್ನೇ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದೀರಿ ಎಂದು ದೇವೇಗೌಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
 
ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸೋಲಿಗೆ ಕಾರಣರಾದ ಧರ್ಮೇಗೌಡರಿಗೆ ವಿಧಾನಪರಿಷತ್ ಟಿಕೆಟ್ ಕೊಟ್ಟಿದ್ದೀರಿ. ಇದು ನೀವು ಮತ್ತು ರೇವಣ್ಣ ನನಗೆ ಮಾಡಿರುವ ಉಪಕಾರ. ಇನ್ಮೇಲೆ ನೀವು ಬೇಡ, ನಿಮ್ಮ ಪಕ್ಷವೂ ಬೇಡ. ನಿಮ್ಮನ್ನು ನಂಬಿ ಬಂದಿದ್ದಕ್ಕೆ ನನಗೆ ನೀವು ಮಾಡಿದ ಉಪಕಾರ ಇದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏತನ್ಮಧ್ಯೆ ದೇವೇಗೌಡರು ಕೂಡ ಅಸಹಾಯಕತೆ ವ್ಯಕ್ತಪಡಿಸಿ ನಾನು ಕೂಡಾ ಧರ್ಮೇಗೌಡರಿಗೆ ಟಿಕೆಟ್ ಕೊಡೋದು ಬೇಡ ಎಂದು ನಾನು ಹೇಳಿದ್ದೆ, ಆದರೆ ಅಷ್ಟರಲ್ಲಾಗಲೇ ಜೆಡಿಎಸ್ ನಿಂದ ಟಿಕೆಟ್ ಹಂಚಿಕೆ ಮಾಡಿ ಆಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com