IPL : ಬೆಟ್ಟಿಂಗ್ ಮಾಡಿದ್ದನ್ನು ಒಪ್ಪಿಕೊಂಡ ಅರ್ಬಾಜ್ : 2.8 ಕೋಟಿ ಕಳೆದುಕೊಂಡ ಸಲ್ಲೂ ಸೋದರ..?

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ಪಂದ್ಯಗಳ ವೇಳೆ ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ನಟ ಹಾಗೂ ನಿರ್ಮಾಪಕರಾಗಿರುವ 50 ವರ್ಷದ ಅರ್ಬಾಜ್ ಖಾನ್ ಅವರನ್ನು ಮಹಾರಾಷ್ಟ್ರದ ಠಾಣೆ ಪೋಲೀಸರು ಶನಿವಾರ ತನಿಖೆಗೊಳಪಡಿಸಿದ್ದರು.

ಈ ವೇಳೆ ತಾವು 6 ವರ್ಷಗಳಿಂದ ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದೇನೆಂದು ಅರ್ಬಾಜ್ ಖಾನ್ ಪೋಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ. ಸೋನು ಜಲನ್ ಎಂಬ ಬುಕ್ಕಿಯನ್ನು ನಂಬಿದ ಅರ್ಬಾಜ್ ಇದುವರೆಗೆ ಬೆಟ್ಟಿಂಗ್ ನಲ್ಲಿ 2.8 ಕೋಟಿ ತೊಡಗಿಸಿದ್ದಾರೆ. ಆದರೆ ಈ ಹಣವನ್ನು ಅರ್ಬಾಜ್ ಖಾನ್, ಬುಕ್ಕಿಗೆ ನೀಡದ ಕಾರಣ ಸೋನು ಜಲನ್ ಸಲ್ಲೂ ಸೋದರನಿಗೆ ಬೆದರಿಕೆ ಹಾಕಿದ್ದಾನೆ.

ಅರ್ಬಾಜ್ ಖಾನ್ ಹಾಗೂ ಬುಕ್ಕಿ ಸೋನು ಜಲನ್ ಇಬ್ಬರನ್ನೂ ಮುಖಾಮುಖಿಯಾಗಿ ಕೂರಿಸಿ ಪೋಲೀಸರು ನಡೆಸಿರುವ ತನಿಖೆಯಲ್ಲಿ ಈ ವಿಷಯಗಳು ಬಹಿರಂಗಗೊಂಡಿವೆ.

Leave a Reply

Your email address will not be published.

Social Media Auto Publish Powered By : XYZScripts.com