ಕುಮಾರಸ್ವಾಮಿ ಈಗ ಉತ್ತರಕುಮಾರನಾಗಿದ್ದಾರೆ : ಎಚ್‌ಡಿಕೆ ವಿರುದ್ಧ ಆಯನೂರು ಮಂಜುನಾಥ್‌ ವಾಗ್ದಾಳಿ

ಉಡುಪಿ : ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರ ಸಂಬಂಧ ಬಿಜೆಪಿ ನಾಯಕ ಆಯನೂರು ಮಂಜುನಾಥ್‌ ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ಗಜ ಗರ್ಭದ ತರ ಕಾಣಿಸುತ್ತಿದೆ. ಕಾಂಗ್ರೆಸ್ – ಬಿಜೆಪಿಯದ್ದು ಹಾವು ಮುಂಗುಸಿ ಸಂಸಾರ. ಬಿಜೆಪಿಗೆ ಹೆಸರಿ ಹಾವು ಮುಂಗುಸಿ ಒಟ್ಟಾಗಿವೆ ಎಂದಿದ್ದಾರೆ.


ಚುನಾವಣೆಗೆ ಮುನ್ನ ಅವರು ಕುಮಾರಸ್ವಾಮಿ ಆಗಿದ್ದರು. ಈಗ ಕುಮಾರಸ್ವಾಮಿ ಉತ್ತರ ಕುಮಾರನಾಗಿದ್ದಾರೆ. ಫಲಿತಾಂಶ ಬಂದ ನಂತರ ಮಹಾಭಾರತದ ಉತ್ತರ ಕುಮಾರನಾಗಿದ್ದಾರೆ. ಸಾಲಮನ್ನಾ ವಿಚಾರದಲ್ಲಿ ಬಂದೂಕನ್ನು ಕಾಂಗ್ರೆಸ್ ಹೆಗಲ ಮೇಲೆ ಇಟ್ಟಿದ್ದಾರೆ.
ಸಿಎಂ ಸುಳ್ಳು ಹೇಳುವ ನಯವಂಚಕ ಎಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.