ದೇಶಕ್ಕೆ ಮನಮೋಹನ್‌ ಸಿಂಗ್‌ರಂತಹ ಜ್ಞಾನವಿರುವ ಪ್ರಧಾನಿ ಬೇಕಿದೆ : ಕೇಜ್ರಿವಾಲ್‌

ದೆಹಲಿ : ದೇಶದ ಅನೇಕ ರಾಜ್ಯಗಳಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಬಂದ ಬಳಿ ಮೋದಿ ವಿರುದ್ಧ ವಿಪಕ್ಷ ನಾಯಕರೆಲ್ಲ ಮುಗಿಬಿದ್ದಿದ್ದಾರೆ.

ಇದೇ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮಾಧ್ಯಮಗಾರರೊಂದಿಗೆ ಮಾತನಾಡಿದ್ದು, ಮೋದಿ ವಿರುದ್ಧದ ಜನಾಕ್ರೋಶವೇ ಈ ಚುನಾವಣೆ ಎಂದಿದ್ದಾರೆ. ದೇಶದ ಜನತೆ ಮೋದಿ ಆಡಳಿತದಿಂದ ಬೇಸತ್ತಿದ್ದು, ಉಪಚುನಾವಣೆ ಮೂಲಕ ತಮ್ಮ ಸಮಾಧಾನವನ್ನು ಹೊರ ಹಾಕಿದ್ದಾರೆ . ಮೋದಿ ಅವರಿಗೆ ಪರ್ಯಾಯ ಯಾರು ಎಂದು ಜನ ಕೇಳುತ್ತಿದ್ದಾರೆ. ಇದಕ್ಕೆ 2019ರ ಚುನಾವಣೆಯವರೆಗೂ ಕಾಯಬೇಕು ಎಂದಿದ್ದಾರೆ.

ಇದೇ ವೇಳೆ ಮಾಜಿ ಪಿಎಂ ಮನಮೋಹನ್ ಸಿಂಗ್ ಅವರನ್ನು ಹೊಗಳಿದ ಕೇಜ್ರಿವಾಲ್, ಮನಮೋಹನ್ ಸಿಂಗ್ ಅವರಂಥ ವಿದ್ಯಾವಂತ ಪ್ರಧಾನಿಯನ್ನು ದೇಶ ಎದುರು ನೋಡುತ್ತಿದೆ. ಮನಮೋಹನ್‌ ಸಿಂಗ್‌ ಅವರನ್ನು ಮೀರಿಸುವ ಪ್ರಧಾನಿ ಯಾರೂ ಇಲ್ಲ ಎಂದು ಮೋದಿಗೆ ಟಾಂಗ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com