ಜಿ. ಪರಮೇಶ್ವರ್‌ಗೆ ಸಂಕಷ್ಟ : ಕೆಪಿಸಿಸಿ ಅಧ್ಯಕ್ಷರ ಕೈ ತಪ್ಪಲಿದೆಯೇ ಡಿಸಿಎಂ ಪಟ್ಟ….?

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರದಂತೆ ತಡೆಯಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸರ್ಕಾಗಳು ಮೈತ್ರಿ ಮಾಡಿಕೊಂಡಿದ್ದವು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿಯೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಉಪಮುಖ್ಯಮಂತ್ರಿಯಾಗಿಯೂ ಅಧಿಕಾರ ಸ್ವೀಕರಿಸಿದ್ದರು.

ಆದರೆ  ಇದೀಗ ಉಪಮುಖ್ಯಮಂತ್ರಿ ಎಂಬ ಹುದ್ದೆಯು ಭಾರತೀಯ ಸಂವಿಧಾನದ ಪ್ರಕಾರ ಕಾನೂನು ಬಾಹಿರವಾಗಿದ್ದು, ಈ ಹುದ್ದೆಯನ್ನು ರದ್ದು ಮಾಡಬೇಕು ಎಂದು ವ್ಯಕ್ತಿಯೋರ್ವರು ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರಿನ ಶೇಖರ್​ ಅಯ್ಯರ್​ ಎಂಬುವವರು ಹೈಕೋರ್ಟ್​ನಲ್ಲಿ ಈ ವಿಚಾರವಾಗಿ ಪಿಐಎಲ್​ ಸಲ್ಲಿಸಿದ್ದಾರೆ. ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪವಿಲ್ಲ. ಡಿಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕಾರಿಸುವುದು ಸಂವಿಧಾನ ಬಾಹಿರ. ಜಿ. ಪರಮೇಶ್ವರ್​ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಹಾಗಾಗಿ ಈ ಹುದ್ದೆಯನ್ನು ಕಾನೂನು ಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಸಂಬಂಧ ಸದ್ಯದಲ್ಲೇ ನ್ಯಾಯಾಲಯ ವಿಚಾರಣೆ ನಡೆಸಲಿದ್ದು, ಕೋರ್ಟ್‌ ಯಾವ  ತೀರ್ಮಾನ ಕೈಗೊಳ್ಳುತ್ತದೆ. ಪರಮೇಶ್ವರ್‌ ಅವರಿಗೆ ಡಿಸಿಎಂ  ಹುದ್ದೆ ಕೈ ತಪ್ಪುತ್ತಾ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com