Health tips : ಕ್ಯಾರೆಟ್ ತಿಂದು ಬೊಜ್ಜು ಕರಗಿಸಿಕೊಳ್ಳಿ…..

ಕ್ಯಾರೆಟ್ ತಿಂದು ಬೊಜ್ಜು ಕರಗಿಸಿಕೊಳ್ಳಿ. ಕ್ಯಾರೆಟ್ ಎಲ್ಲಾ ಕಾಲದಲ್ಲಿಯೂ ಬೇಡಿಕೆಯಲ್ಲೇ ಇರುವ ತರಕಾರಿ. ಪಲಾವ್, ಬಿಸಿಬೇಳೆ ಬಾತ್  ಇತರ ರುಚಿ ರುಚಿಯ ಖಾದ್ಯಗಳಿಗೂ ಕ್ಯಾರೆಟ್ ಬೇಕೇ ಬೇಕು. ಕೇವಲ ರುಚಿಗಷ್ಟೇ ಅಲ್ಲ, ಕ್ಯಾರೆಟ್ ದೇಹದ ಆರೋಗ್ಯದಲ್ಲೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾರೆಟ್ನಲ್ಲಿ ದೇಹದಲ್ಲಿನ ಅಧಿಕ ಬೊಜ್ಜು ಕರಗಿಸುವ ಗುಣ ಇರುವುದರಿಂದ ಇದು ಹೃದಯ ಸಂಬಂಧೀ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ದಿನನಿತ್ಯದ ಆಹಾರ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಎಲ್ಲಾ ರೋಗಗಳಿಗೂ ಮೂಲವಾಗಿರುವ ದೇಹದ ಅಧಿಕ ಬೊಜ್ಜನ್ನು ಕರಗಿಸಿಕೊಳ್ಳಬಹುದು.
ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು ಇಲ್ಲವೆಂದರೆ ಸೂಪ್, ಸಲಾಡ್ ಮತ್ತು ಜ್ಯೂಸ್ ಮಾಡಿಯೂ ಸೇವಿಸಬಹುದು.
ಕ್ಯಾರೆಟ್ ನಿಂದ ನೈಸರ್ಗಿಕವಾಗಿ ತೂಕ ಇಳಿಸುವ ವಿಧಾನ:
ಬೆಳಗ್ಗೆ: ಬ್ರೇಕ್ ಫಾಸ್ಟ್ ಗೆ ಕ್ಯಾರೆಟ್ ಜ್ಯೂಸ್ ಅಥವಾ ಮಿಲ್ಕ್ ಶೇಕ್ ಸೇವಿಸಬಹುದು. ಜೊತೆಗೆ ಒಂದು ಮೊಟ್ಟೆಯನ್ನೂ ಸೇವಿಸಬಹುದು.
ಮಧ್ಯಾಹ್ನ: ಟೋಸ್ಟೆಡ್ ಬ್ರೆಡ್ ಜೊತೆ ತುರಿದ ಕ್ಯಾರೆಟ್, ಟೊಮೆಟೊ, ಉಪ್ಪು ಮತ್ತು ಮೆಣಸನ್ನು ಬೆರೆಸಿ ತಿನ್ನಬೇಕು.
ರಾತ್ರಿ: ರಾತ್ರಿ ಊಟಕ್ಕೆ ಕ್ಯಾರೆಟ್ ಮತ್ತು ಬೇಳೆ ಬೆರೆಸಿ ತಯಾರಿಸಿದ ಸೂಪನ್ನು ಸೇವಿಸಬೇಕು ಮತ್ತು ಒಂದು ಕಪ್ ಕೆಂಪಕ್ಕಿ ಅನ್ನವನ್ನು ಮೊಸರಿನ ಜೊತೆ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ.
ಕ್ಯಾರೆಟ್ ಕುರಿತು ಇನ್ನೂ ಹೆಚ್ಚು ತಿಳಿಯಿರಿ: ಕ್ಯಾರೆಟ್ ನಲ್ಲಿನ ಕಾರೊಟಿನ್ ಅಂಶ ದೇಹವನ್ನು ಶುದ್ಧವಿರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
ಕ್ಯಾರೆಟ್ ನಲ್ಲಿ 10 % ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ. ಇವೆಲ್ಲವೂ ಆರೋಗ್ಯಕ್ಕೆ ಹಿತವನ್ನುಂಟುಮಾಡುತ್ತದೆ.
ಕ್ಯಾರೆಟ್ ತಿನ್ನುವುದರಿಂದ ಹೃದಯದ ಸಮಸ್ಯೆಗಳನ್ನು ದೂರವಿಡಬಹುದು. ಮಂದ ದೃಷ್ಟಿ, ಕ್ಯಾನ್ಸರ್ ನಿವಾರಣೆಗು ಇದು ಸಹಕಾರಿ. ಕ್ಯಾರೆಟ್ ನಲ್ಲಿ ಐಯೋಡಿನ್ ಮತ್ತು ಫೈಬರ್ ಇರುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಮಧ್ಯಾಹ್ನ ಮತ್ತು ರಾತ್ರಿ ಲಘು ಊಟದ ನಂತರ ಕ್ಯಾರೆಟ್ ತಿಂದರೆ 3 ರಿಂದ 4 ಕೆ.ಜಿ ತೂಕ ಇಳಿಸಿಕೊಳ್ಳುವುದು ಸಾಧ್ಯವಿದೆ.
ಕ್ಯಾರೆಟ್ ಜ್ಯೂಸು ಮಾಡುವ ವಿಧಾನ.
ಕ್ಯಾರೆಟ್ -3ರಿಂದ 4
ಸಕ್ಕರೆ – ಅರ್ಧ ಬಟ್ಟಲು
ಜೇನುತುಪ್ಪ – 4 ಚಮಚ
ನಿಂಬೆರಸ – 2 ಚಮಚ
ಕ್ಯಾರೆಟ್ ಜೊತೆಗೆ ಸಕ್ಕರೆ, ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ರುಬ್ಬಿದ ರಸವನ್ನು ಸೋಸಿಟ್ಟುಕೊಳ್ಳಿ. ಇದಕ್ಕೆ ನಿಂಬೆರಸ, ಜೇನುತುಪ್ಪ ಮಿಶ್ರಮಾಡಿ. ಇದಕ್ಕೆ ಐಸ್ ಕ್ಯೂಬ್ ಹಾಕಿದರೆ ಕ್ಯಾರೆಟ್ ಜ್ಯೂಸ್ ಕುಡಿಯಲು ಸಿದ್ದ. ಇದು ಬೇಸಿಗೆ ಮಾತ್ರವಲ್ಲ ಎಲ್ಲಕಾಲದಲ್ಲೂ ಆರೋಗ್ಯಕ್ಕೆ ಉತ್ತಮ.

Leave a Reply

Your email address will not be published.

Social Media Auto Publish Powered By : XYZScripts.com