ರೇವಣ್ಣ ಜೊತೆ ಮಾತನಾಡೋಕೆ ನಾನೇನು ಮೆಂಟಲ್ಲಾ : ಕೆಂಡಾಮಂಡಲರಾದ ಡಿಕೆಶಿ

ಬೆಂಗಳೂರು : ಖಾತೆ ಹಂಚಿಕೆ ವಿಷಯವಾಗಿ ರೇವಣ್ಣ ಅವರ ಜತೆ ಚರ್ಚೆ ಮಾಡಲು ಅಥವಾ ಜಗಳವಾಡಲು ನಾನೇನು ಮೆಂಟಲ್ಲಾ ಎಂದು ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.

ನನ್ನನ್ನೇಕೆ ರೇವಣ್ಣ ಅವರ ಜೊತೆ ಹೋಲಿಕೆ ಮಾಡುತ್ತೀರ. ಅವರು ದೊಡ್ಡವರು. ನಾನೇ ಏನೇ ಇದ್ದರೂ ಪಕ್ಷದ ಮುಖಂಡರ ಜೊತೆ ಮಾತಾಡುತ್ತೇನೆ. ರೇವಣ್ಣ ದೊಡ್ಡ ನಾಯಕರು, ಅವರ ಜೊತೆ ನನ್ನನ್ನು ಹೋಲಿಸಬೇಡಿ ಎಂದಿದ್ದಾರೆ.

ನಾನು ಡಿಸಿಎಂ ಹುದ್ದೇ ಕೇಳಿದ್ದೀನಿ ಅಂತ ನಿಮಗೆ ಹೇಳಿದ್ಯಾರು ಎಂದು ಪ್ರಶ್ನಿಸಿರುವ ಡಿಕೆಶಿ, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಎಂದೂ ನಾನು ಕೇಳಿಲ್ಲ.  ಹಾಗಂತ ನಾನು ಸನ್ಯಾಸಿ ಅಲ್ಲ. ನನ್ನ ಗುರಿ ಬೇರೆ, ನನ್ನ ಟಾರ್ಗೆಟ್ ಬೇರೆ. ವಾಚ್​ಮನ್ ಕೆಲಸ ಅಂದ್ರೆ ನಂಬಿಕೆ ಕೆಲಸ ಅಲ್ವಾ ಎಂದಿದ್ದಾರೆ. ಅಲ್ಲದೆ ಅಂತಹ ವಾಚ್​ಮನ್​ ಕೆಲಸವನ್ನೇ ಹೈಕಮಾಂಡ್​ ಕೊಟ್ಟಿದೆ. ಇಂಧನ ಖಾತೆ ವಿಚಾರ, ಜನರ, ಬೆಂಬಲಿಗರ ಆಶೀರ್ವಾದ ಇದೆ. ನನಗೆ ಅಷ್ಟೇ ಸಾಕು ಎಂದಿದ್ದಾರೆ.

Leave a Reply

Your email address will not be published.