ಡಿಕೆ ಬ್ರದರ್ಸನ್ನು ಖೆಡ್ಡಕ್ಕೆ ಬೀಳಿಸಲು ಬಿಜೆಪಿ ಪ್ಲ್ಯಾನ್‌ : ಟ್ರಬಲ್‌ ಶೂಟರ್‌ ಪರ ನಿಂತ ಕಾಂಗ್ರೆಸ್ ನಾಯಕರ ದಂಡು

ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಕಾರಣವಾಗಿದ್ದ ಡಿಕೆ ಬ್ರದರ್ಸ್‌ಗೆ ಸಿಬಿಐ ಶಾಕ್ ನೀಡಿದೆ. ನೋಟು ನಿಷೇದದ ವೇಳೆ ಅಕ್ರಮವೆಸಗಿದ್ದಾರೆಂಬ ಕಾರಣಕ್ಕೆ ಬೆಂಗಳೂರು, ರಾಮನಗರ, ಕನಕಪುರದ  ಸೇರಿದಂತೆ ಐದು ಕಡೆ ಶೋಧ ನಡೆಸಿದೆ.

ಡಿಕೆ ಸುರೇಶ್ ಆಪ್ತ ಸಹಾಯಕ ಪದ್ಮನಾಭಯ್ಯಗೆ ಸೇರಿದ ನೆಲಮಂಗಲದ ಟಿ ಬೇಗೂರಲ್ಲಿರುವ ಮನೆ, ಕನಕಪುರ ಉಪ ತಹಶೀಲ್ದಾರ್ ಶಿವಾನಂದ, ಚುನಾವಣಾ ಶಾಖೆಯ ಎಫ್‍ಡಿಎ ನಂಜಪ್ಪಗೆ ಸೇರಿದ ಕನಕಪುರದಲ್ಲಿರುವ ಮನೆಯಲ್ಲಿ ಹುಡುಕಾಟ ನಡೆಸಿತ್ತು. ಕನಕಪುರ ತಹಶೀಲ್ದಾರ್ ಕಚೇರಿ, ರಾಮಜನಗರ ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಿಬಿಐ ಕಡತಗಳ ಪರಿಶೀಲನೆ ನಡೆಸಿದೆ.

ರಾಮನಗರದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್‍ನ ಚೀಫ್ ಮ್ಯಾನೇಜರ್ ಸೇರಿ ಆರು ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ಹೇಳಿಕೆಯ ಮೇಲೆ ಡಿಕೆ ಬ್ರದರ್ಸ್‌  ಭವಿಷ್ಯ ನಿರ್ಧಾರವಾಗಲಿದೆ.

ಆದರೆ ಇದ್ಯಾವುದಕ್ಕೂ ಜಗ್ಗದ ಡಿಕೆ ಬ್ರದರ್ಸ್‌ ಗೆ ಕಾಂಗ್ರೆಸ್‌ ಸಾಥ್ ನೀಡಿದ್ದು, ಕಾಂಗ್ರೆಸ್‌ಗಾಗಿ ದುಡಿದಿರುವ ಇವರಿಗೆ ನಾವೆಂದಿಗೂ ಬೆಂಬಲ ನೀಡುವುದಾಗಿ ಮುಖಂಡರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com