ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್‌ನಲ್ಲಿ ವಿಜಯಪುರದ ಶ್ರೀಧರ್‌ ದೊಡ್ಡಮನಿ ಟಾಪರ್‌

ಬೆಂಗಳೂರು : ಇಂಜಿನಿಯರಿಂಗ್‌ ಹಾಗೂ ಇತರೆ ವೃತ್ತಿ ಶಿಕ್ಷಣ  ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ್ ಕತ್ರಿ ಅವರು, ಫಲಿತಾಂಶ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ಹಾಗೂ ಅಗ್ರಿಕಲ್ಚರ್‌ನಲ್ಲಿ ವಿಜಯಪುರದ ಶ್ರೀಧರ್‌ ದೊಡ್ಡಮನಿ ಮೊದಲ ಸ್ಥಾನ ಗಳಿಸಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ದಕ್ಷಿಣ ಕನ್ನಡದ ನಾರಾಯಣ ಪೈ ಎರಡನೇ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಹಿಮಾ ಕೃಷ್ಣ ತೃತೀಯ ಹಾಗೂ ಬಳ್ಳಾರಿಯ ಎಸ್‌.ಆರ್‌ ಅಪರೂಪ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಇನ್ನು ತುಹಿನ್‌ ಗಿರಿನಾಥ್‌ ಬೆಂಗಳೂರಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಸಿಇಟಿಯ ನಾನಾ ವಿಭಾಗಗಳಲ್ಲಿ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ವಿವರ 

ಅಗ್ರಿಕಲ್ಚರ್‌ನಲ್ಲಿ ಎರಡನೇ ಸ್ಥಾನವನ್ನು ಹುಬ್ಬಳ್ಳಿಯ ಚೇತನ್‌ ಐಎನ್‌ಡಿಪಿ ಕಾಲೇಜಿನ ಸಾಯಿ ಕುಮಾರ್‌ ಆರ್‌ ಸಾದುನವರ್‌ ಪಡೆದುಕೊಂಡಿದ್ದಾರೆ.

ವೆಟರ್ನರಿ ವಿಭಾಗದಲ್ಲಿ ಮಂಗಳೂರು ವಳಚ್ಚಿಲ್‌ ಎಕ್ಸ್‌ಪರ್ಟ್‌ ಕಾಲೇಜಿನ ವಿನೀತ್‌ ಮೇಗೂರ್‌ ಮೊದಲ, ಬಳ್ಳಾರಿ ಸಂಕಲ್ಪ ಪಿಯು ಕಾಲೇಜಿನ ಎಸ್‌. ಆರ್‌. ಅಪರೂಪ ಎರಡನೇ ಸ್ಥಾನ ಗಳಿಸಿದ್ದಾರೆ.

ಬಿ.ಫಾರ್ಮಾದಲ್ಲಿ ಬೆಂಗಳೂರು ಕುಂದನಹಳ್ಳಿ ನಾರಾಯಣ ಇ ಟೆಕ್ನೊ ಸ್ಕೂಲ್‌ನ ತುಹಿನ್‌ ಗುರುನಾಥ್‌ ಮೊದಲ, ಇಂದಿರಾನಗರ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಅನಿತಾ ಜೇಮ್ಸ್‌ ಎರಡನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

1) www.kea.kar.nic.in
2) www.cet.kar.nic.in
3) www.karresults.nic.in

ಈ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.

Leave a Reply

Your email address will not be published.