19ರ ಯುವಕನ ಬಾಯಿಗೆ ಬಟ್ಟೆ ತುರುಕಿದ ಆಟೋ ಚಾಲಕ ಮಾಡಿದ್ದೇನು…. !

ಬೆಂಗಳೂರು : ಚೆನ್ನಮ್ಮನ ಕೆರೆ ಅಚ್ಚುಕಟ್ಟಿನ ಇಟ್ಟಮಡು ಪ್ರದೇಶದಲ್ಲಿ ಆಟೋಚಾಲಕನೊಬ್ಬ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.

ಮೇ 23ರಂದು ಘಟನೆ ನಡೆದಿದ್ದು, ಲಕ್ಷ್ಮಣ್ ಎಂಬ 19 ವರ್ಷದ ಹುಡುಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು. ಲಕ್ಷ್ಮಣ್ ಬ್ಯಾಂಕ್‌ಗೆ ಹೋಗಬೇಕೆಂಬ ಕಾರಣಕ್ಕೆ ರಾಜೇಶ್‌ ಎಂಬಾತನ ಆಟೋ ಹತ್ತಿದ್ದನು. ಈ ವೇಳೆ ರಾಜೇಶ್‌ ತನ್ನ ಆಟೋದಲ್ಲಿ  ತಮ್ಮ ಮನೆ ಬಳಿ  ತೆರಳಿ ಬಟ್ಟೆ ಬದಲಿಸಿ ಬರುವುದಾಗಿ ಹೇಳಿದ್ದನು.

ಬಳಿಕ ರಾಜೇಶ್‌, ಲಕ್ಷ್ಮಣ್‌ನನ್ನೂ ತನ್ನ ಮನೆಯ ಒಳಗೆ ಬರುವಂತೆ ಕರೆದುಕೊಂಡು ಹೋಗಿದ್ದನು. ಈ ವೇಳೆ ರಾಜೇಶ್‌, ಲಕ್ಷ್ಮಣ್ ಬಾಯಿಯನ್ನು ಬಟ್ಟೆಯಿಂದ ಕಟ್ಟಿ ಆತನ ಮೇಲೆ ಲೈಂಗಿಕ ದೌರ್ಜಯನ್ಯ ನಡೆಸಿದ್ದ. ಅಲ್ಲದೆ ಈ ಕೃತ್ಯವೆಸಗುವಾಗ ರಾಜೇಶ್‌ ವಿಡಿಯೋ ಮಾಡಿರುವುದಾಗಿ ತಿಳಿದುಬಂದಿದೆ. ಅಲ್ಲದೆ ವಿಷಯ ಬಾಯಿ ಬಿಟ್ಟರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಆದರೆ ಈಗ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ  ಲಕ್ಷ್ಮಣ್‌ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com