ಸಂಪುಟ ವಿಸ್ತರಣೆಯಾದ ಒಂದು ವಾರದಲ್ಲೇ ಸರ್ಕಾರ ಬಿದ್ದು ಹೋಗುತ್ತೆ : ಭವಿಷ್ಯ ನುಡಿದ ಕೈ ನಾಯಕ !

ತುಮಕೂರು : ಸಂಪುಟ ವಿಸ್ತರಣೆ ಆದ ಒಂದು ವಾರದ ಬಳಿಕ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಮಧುಗಿರಿ ಕ್ಷೇತ್ರದಲ್ಲಿ ಪರಾಜಿತಗೊಂಡಿದ್ದ ಕೆ.ಎನ್. ರಾಜಣ್ಣ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ್ದು, ಸಿಎಂ ಕುಮಾರಸ್ವಾಮಿಯೇ ಹೇಳಿದ್ದಾರೆ ನನಗೆ ಮುಖ್ಯಮಂತ್ರಿ ಪದವಿ ಬೇಕಾಗಿಲ್ಲ. ರಾಜೀನಾಮೆ ಕೊಟ್ಟು ಹೋಗ್ತಿನಿ ಅಂತ. ಹಾಗಾಗಿ ಮರು‌‌‌ ಚುನಾವಣೆ ಯಾವ ಕ್ಷಣದಲ್ಲಾದರೂ ನಡೆಯಬಹುದು. ಆಗ ನಾನು ಗೆಲ್ಲುತ್ತೇನೆ. ರಾಜ್ಯದ ರೈತರ ಸಾಲಮನ್ನಾ ಮಾಡುವವರೆಗಾದರೂ ಮೈತ್ರಿ ಸರ್ಕಾರ ಉಳಿಯಬೇಕು ಎಂದಿದ್ದಾರೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆದ ‌24 ಗಂಟೆಯಲ್ಲಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಒಂದುವಾರವಾದರೂ ಸಾಲ ಮನ್ನಾ ಮಾಡಿಲ್ಲ. ಇನ್ನೂ ಒಂದು ವಾರ ಕಾದು ಕುಮಾರಸ್ವಾಮಿ ವಿರುದ್ದ ಬೀದಿಗಿಳಿದು ಹೋರಾಟ ಮಾಡುತ್ತೇವೆ . 35 ಕೆ.ಜಿ ಅಕ್ಕಿ ಕೊಡ್ತಿನಿ ಅಂದಿದ್ದರು. ಅದೂ ಕೊಡುವ ಲಕ್ಷಣ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.