ನೋಟಾ v/s ಹುಚ್ಚ ವೆಂಕಟ್‌ : ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಗೆದ್ದಿದ್ಯಾರು ?

ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಜಯಗಳಿಸಿರುವುದು ಗೊತ್ತಿರುವ ವಿಚಾರವೇ. ಆದರೆ ಇದೇ ಕ್ಷೇತ್ರದಲ್ಲಿ ಹುಚ್ಚ ವೆಂಕಟ್‌ ಸಹ ಸ್ಪರ್ಧಿಸಿದ್ದು, ಅವರಿಗೂ ಜನರು ಮತ ಹಾಕಿದ್ದಾರೆ.

ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಮತ್ತು ನಿರ್ದೇಶಕ ಹುಚ್ಚ ವೆಂಕಟ್ ಅವರು 764 ಮತಗಳನ್ನು ಪಡೆದಿದ್ದಾರೆ. 15 ಅಭ್ಯರ್ಥಿಗಳಿದ್ದ ಕಣದಲ್ಲಿ ಹುಚ್ಚ ವೆಂಕಟ್ ಗಳಿಸಿದ ಮತಗಳಿಗಿಂತ ನೋಟಾಗೆ ಹೆಚ್ಚು ವೋಟು ಬಿದ್ದಿದೆ.

ನೋಟಾಗೆ  2,724 ವೋಟು ಚಲಾವಣೆಯಾಗಿದೆ. ಆರ್ ಆರ್ ನಗರದಲ್ಲಿ ಒಟ್ಟು 2,56,447 ಮತಗಳಿದ್ದವು. ಅದರಲ್ಲಿ 764 ಮತಗಳು ಹುಚ್ಚ ವೆಂಕಟ್‌ಗೆ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 1,08,064 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ 82,572 ಮತಗಳಳನ್ನು ಗಳಿಸಿದ್ದಾರೆ. ಇನ್ನು ಜೆಡಿಎಸ್‍ನ ರಾಮಚಂದ್ರ ಅವರು 60,360 ಮತಗಳು ಪಡೆದುಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com