ಸೊಸೆಯ ಕಾಟಕ್ಕೆ ರಸ್ತೆ ಮೇಲೆಯೇ ಪೂಜೆ ಮಾಡಿದ ಮಾವ ಬಳಿಕ ಮಾಡಿದ್ದೇನು ?

ಮಂಡ್ಯ : ಹಿಂದೆಲ್ಲ ಮನೆಗೆ ಬಂದ ಸೊಸೆಗೆ ಅತ್ತೆ, ಮಾವ ಕಿರುಕುಳ ಕೊಡುತ್ತಿದ್ದ ಸಂಗತಿ ಸಾಮಾನ್ಯವಾಗಿ ಕೇಳಿಬರುತ್ತಿ್ತು. ಆದರೆ ಈಗ, ಸೊಸೆಯಂದಿರೇ ಅತ್ತೆ ಮಾವನಿಗೆ ಕಿರುಕುಳ ನೀಡುತ್ತಿರುವ ಪ್ರಸಂಗ ಎದುರಾಗಿದೆ.

ಅದಕ್ಕೆ ಉದಾಹರಣೆ ಎಂಬಂತೆ ಕೌಟುಂಬಿಕ ಕಲಹಕ್ಕೆ ಬೇಸತ್ತು ಡೆತ್‌ನೋಟ್‌ ಬರೆದಿಟ್ಟು ವೃದ್ಧರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಮಳವಳ್ಳಿ ತಾಲ್ಲೂಕಿನ ಕಿರಗಸೂರು ಗ್ರಾಮದಲ್ಲಿ ನಡೆದಿದೆ.

ಕಿರಗಸೂರು ಗ್ರಾಮದ ಮರಿಸ್ವಾಮಿ(೬೦) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಸೊಸೆಯ ಕಿರುಕುಳದಿಂದ ಮನೆಬಿಟ್ಟು ಹೋಗಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ರಸ್ತೆಯ ಮೇಲೆ ದೇವರಿಗೆ ಪೂಜೆ ಸಲ್ಲಿಸಿ ತನ್ನ ಸಾವಿಗೆ ಸೊಸೆ ಕಾರಣ ಎಂದು ಸೀಮೆಸುಣ್ಣದಲ್ಲಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com