IPL Hungama : ವಿ ಮಿಸ್ ಯೂ “ಹಾಟ್” ಬೇಬಿ..!

ಎರಡು ತಿಂಗಳ ಹಬ್ಬ..ಎಲ್ಲಿ ನೋಡಿದ್ರೂ ಕಲರ್ ಕಲರ್ ಜರ್ಸಿಗಳ ನಡುವಿನ ಕದನ..ಪ್ರತಿ ದಿನವೂ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಯಾರೂ ಗೆಲ್ತಾರೆ ಅನ್ನೋ ಕಾತುರವಿತ್ತು.. ಹಬ್ಬದ ವಾತಾವರಣಕ್ಕೆ ಭರ್ಜರಿಯಾಗಿ ತೆರೆಬಿದ್ದಿದೆ..ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಸಿ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಯಾಗಿದೆ

ಅಯ್ಯೋ ಮುಗೀತು ಅನ್ನೋ ಉದ್ಘಾರ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗಿದೆ..ಸಂಜೆಯಾಗುತ್ತಿದ್ದಂತೆ ಟಿವಿ ಮುಂದೆ ಕೂತು ಪಂದ್ಯ ನೋಡುತ್ತಿದ್ದವರಿಗೆ ಈಗ ಏನೋ ಕಳೆದುಕೊಂಡಂತೆ ಆಗುವುದರಲ್ಲಿ ಅನುಮಾನವಿಲ್ಲ. ಒಂದಷ್ಟು ಅಭಿಯಾನಗಳು, ಕಪ್ ನಮ್ದೇ ಅನ್ನುವ ಕೂಗು, ಕಬಾಲಿಡಾ, ವಿಶಿಲ್ ಪೋಡು ಹೀಗೆ ಒಂದಾ ಎರಡಾ ಐಪಿಎಲ್ ಕ್ರಿಯೆಟ್ ಮಾಡಿರುವ ಹವಾಗೆ ಬ್ರೇಕ್ ಬಿದ್ದಿದೆ.

ಐಪಿಎಲ್ ಟೂರ್ನಿಯನ್ನು ಪ್ರಸಾರ ಮಾಡಿದ್ದ ವಾಹಿನಿಗಳು ತಮ್ಮ ಟಿ ಆರ್ ಪಿಯನ್ನು ಹೆಚ್ಚಿಸಿಕೊಂಡಿವೆ. ಟಿವಿಗಳಲ್ಲಿ ನೋಡುವವರ ಜೊತೆ ಆನ್ ಲೈನ್ ನಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಿದ ಹಾಟ್ ಸ್ಟಾರ್ ಭಾರೀ ಬೇಡಿಕೆ ಪಡೆದುಕೊಂಡಿತ್ತು. ಪ್ರತಿ ಪಂದ್ಯವನ್ನು ಕೂಡಲ ಲಕ್ಷಗಟ್ಟಲೇ ಜನರು ನೋಡುತ್ತಿದ್ರು. ಹಾಟ್ ಸ್ಟಾರ್ನಲ್ಲಿ ಐಪಿಎಲ್ ಪ್ರಸಾರವಾಗುತ್ತಿರುವುದರಿಂದ 4G ನೆಟ್ ವರ್ಕ್ ಇರುವವರಿಗೆ ಹಾಟ್ ಫೆವರಿಟ್ ಅಪ್ಲಿಕೇಷನ್ ಹಾಟ್ ಸ್ಟಾರ್ ಆಗಿತ್ತು

ದೇಶದ ಮೂಲೆ ಮೂಲೆಗೆ ತಲಪುವ ಪ್ರಯತ್ನದಲ್ಲಿ ಸ್ಟಾರ್ ಸ್ಪೋರ್ಟ್ಸ್ ಸಫಲವಾದಂತೆ ಕಂಡುಬರುತ್ತಿದೆ.ಯಾಕಂದ್ರೆ ಒಟ್ಟು ಹತ್ತು ವಾಹಿನಿಗಳಲ್ಲಿ ಐಪಿಎಲ್ ಪ್ರಸಾರವಾಗಿದೆ. ಅಲ್ಲದೇ ಆರು ಬೇರೆ ಬೇರೆ ಬಾಷೆಗಳಲ್ಲಿ ಪ್ರಸಾರ ಮಾಡಿರುವುದರಿಂದ ಜನರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನ ಮಾಡಿ ಸಫಲವಾಗಿದೆ. ಅಲ್ಲದೇ ಪ್ರಾದೇಶಿಕವಾಗಿ ಸ್ಟಾರ್ ಸ್ಫೋರ್ಟ್ಸ್ ಗೆ ಮಾರ್ಕೆಟ್ ಇರುವುದನ್ನು ಸ್ಟಾರ್ ಗ್ರೂಪ್ ಗಮನಿಸಿದೆ.

ಹಾಟ್ ಸ್ಟಾರ್ ಕೆಲವೊಂದು ಪಂದ್ಯಗಳ ಪ್ರಸಾರ ಮಾಡಿ ವಿಶ್ವದಾಖಲೆ ನಿರ್ಮಿಸಿರುವುದಾಗಿ ಕೆಲ ವರದಿಗಳು ಹೇಳುತ್ತಿವೆ. ಅದರಲ್ಲೂ ಲೀಗ್ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್ ನಡುವಿನ ಹೋರಾಟವನ್ನು ಗರಿಷ್ಠ ಸಂಖ್ಯೆಯಲ್ಲಿ ಜನ ನೋಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಕಳೆದ ಸೀಸನ್ ಗಳಲ್ಲಿ ಐಪಿಎಲ್ನ್ನು ಆನ್ ಲೈನ್ ಅಪ್ಲಿಕೇಷನ್ ನಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ವೇಳೆ ರಿಯಲ್ ಟೈಮ್ ಬದಲು 15 ನಿಮಿಷ ತಡವಾಗಿ ಪ್ರಸಾರವಾಗುತ್ತಿತ್ತು. ಆದರೆ ಬಾರಿ ರಿಯಲ್ ಟೈಮ್ ಪ್ರಸಾರ ಮಾಡಲು ಅನುವು ನೀಡಿರುವುದರಿಂದ ಹಾಟ್ ಸ್ಟಾರ್ ಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಈಗ ಐಪಿಎಲ್ ಮುಗಿದಿರುವುದರಿಂದ ಅಭಿಮಾನಿಗಳು ಹಾಟ್ಸ್ಟಾರ್ ನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ಮುಂದಿನ ಬಾರಿ ವಿದೇಶದಲ್ಲಿ ನಡೆಯುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆ ನಿಗದಿಯಾಗುವ ಸಾಧ್ಯತೆಯಿರುವುದರಿಂದ ಟೂರ್ನಿ ದಕ್ಷಿಣ ಆಫ್ರಿಕಾಗೆ ಶಿಫ್ಟ್ ಆಗುವ ಸಾಧ್ಯತೆಗಳಿದೆ. ಆದ್ದರಿಂದ ಅಭಿಮಾನಿಗಳು ಅದಕ್ಕಾಗಿ ಈಗನಿಂದಲೇ ಚಿಂತೆ ಮಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಐಪಿಎಲ್ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆದಿತ್ತು

ಐಪಿಎಲ್ಆಟಗಾರರ ಮೇಲೆ ತಂಡಗಳ ಮೇಲೆ ಫಿಕ್ಸಿಂಗ್ ಆರೋಪ, ಬೆಟ್ಟಿಂಗ್ ಆರೋಪ ಎಲ್ಲಾ ಕೇಳಿಬಂತು..ಎರಡು ತಂಡಗಳು ನಿಷೇಧ ಶಿಕ್ಷೆಗೆ ಒಳಪಟ್ಟು ವಾಪಾಸ್ ಬಂದ್ವು..ಏನೇ ಆದರೂ ಕ್ರಿಕೆಟ್ ಪ್ರಿಯರು ಮಾತ್ರ ಐಪಿಎಲ್ ನೋಡೋದನ್ನು, ತಮ್ಮ ನೆಚ್ಚಿನ ತಂಡಗಳಿಗೆ ಸಪೋರ್ಟ್ ಮಾಡುವುದನ್ನು ಮರೆತಿಲ್ಲ..ಇದರಿಂದ ಗೊತ್ತಾಗುತ್ತೆ ಭಾರತದಲ್ಲಿ ಕ್ರಿಕೆಟ್ ಧರ್ಮವಾಗಿ ತಳಮಟ್ಟದಲ್ಲಿ ಬೇರೂರಿದೆ, ಕಳ್ಳಾಟ, ಕೆಟ್ಟಾಟಗಳು ಏನೇ ಇದ್ದರೂ ಕ್ರಿಕೆಟ್ ಅಷ್ಟೇ ಜನರಿಗೆ ಬೇಕು..ಆದ್ದರಿಂದ ಜನರು ಸದಾ ಕ್ರಿಕೆಟನ್ನು ಗೆಲ್ಲಿಸುತ್ತಾರೆ ಅನ್ನೋದು ಸಾಬೀತಾಗಿದೆ. ಬಾರಿಯೂ ಕ್ರಿಕೆಟ್ ಗೆದ್ದಿದೆ..

DD

Leave a Reply

Your email address will not be published.

Social Media Auto Publish Powered By : XYZScripts.com