ಅಪ್ರಾಪ್ತ ಮಕ್ಕಳ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ : ಹಿಂಸೆ ತಾಳಲಾರದೆ ಅಮ್ಮನ ಬಳಿ ನೋವು ಹಂಚಿಕೊಂಡ ಮಕ್ಕಳು

ಹಾವೇರಿ : ಅಪ್ರಾಪ್ತ ಮಕ್ಕಳ ಮೇಲೆ ಚಿಕ್ಕಪ್ಪನೇ ಅತ್ಯಾಚಾರವೆಸಗಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತ ಮಕ್ಕಳನ್ನು ಕಾಮತೃಷೆಗೆ ಬಳಸಿಕೊಂಡ ಆರೋಪಿಯನ್ನು ದೀಪಕ್‌ ಉಪಳೆ (36) ಎಂದು ಹೆಸರಿಸಲಾಗಿದೆ.  ಅಣ್ಣ ಸತ್ತ ನಂತರ ಅತ್ತಿಗೆಯನ್ನು ಮದುವೆಯಾಗಿ, ಅಣ್ಣನ ಅಪ್ರಾಪ್ತ ಇಬ್ಬರು ಹೆಣ್ಣು ಮಕ್ಕಳ ಮೇಲೆ ಎರಡು ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಅಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದು,  ಈತನ ಹಿಂಸೆ ತಾಳಲಾರದೆ ಮಕ್ಕಳಿಬ್ಬರೂ ತಾಯಿ ಬಳಿ ವಿಚಾರ ಹಂಚಿಕೊಂಡಿದ್ದಾರೆ. ಮಕ್ಕಳ ಸ್ಥಿತಿಯನ್ನು ನೋಡಿ ತಾಯಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು, ಹಾವೇರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೊ ಮತ್ತು ಮಹಿಳಾ ಹಿಂಸೆ ಪ್ರಕರಣ ದಾಖಲಿಸಲಾಗಿದ್ದು, ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com