ಹನಿಮೂನ್‌ ಟೈಂ ಮುಗಿಯೋ ಮುಂಚೇನೆ ಅಸಹನೆ : ಕೈ-ದಳದ ದೋಸ್ತಿ ಬಗ್ಗೆ C.T ರವಿ ವ್ಯಂಗ್ಯ

ಹಾಸನ :  ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿಯೇ ಜೆಡಿಎಸ್, ಕಾಂಗ್ರೆಸ್ ಷಡ್ಯಂತ್ರ ರೂಪಿಸಿ, ಅಧಿಕಾರಕ್ಕೆ ಬಂದಿದ್ದು, ಆದರೆ ಇವರ ಹನಿಮೂನ್‌ ಸಮಯ ಮುಗಿಯೋ ಮುಂಚೇನೆ ಅಸಹನೆ ಮೊಳಕೆಯೊಡೆಯುತ್ತಿದೆ ಎಂದು ಶಾಸಕ ಸಿ.ಟಿ ರವಿ ವ್ಯಂಗ್ಯ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾಡುತ್ತೇನೆ. ದಯವಿಟ್ಟು ನನಗೆ ಮತ ನೀಡಿ ಎಂದು ಗೋಗರೆದಿದ್ದರು. ಈಗ ಅಧಿಕಾರ ಕೈಗೆ ಸಿಕ್ಕಿಗೆ. ಸಾಲಮನ್ನಾ ಮಾಡಿ ಎಂದು ಒತ್ತಾಯಿಸಿದ್ದಾರೆ. ಈಗ ಎಚ್‌ಡಿಕೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಇಲ್ಲಸಲ್ಲದ ಸಬೂಬು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಮೊದಲು ರೈತರ ಸಾಲಮನ್ನಾ ಮಾಡಿ ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ ಮಳೆಯ ಆರ್ಭಟಕ್ಕೆ ದಕ್ಷಿಣ ಕನ್ನಡದಲ್ಲಿ ಭಾರೀ ಅನಾಹುತವಾಗಿದೆ. ಆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ  ರಾಜ್ಯ ಸರ್ಕಾರವನ್ನ ಒತ್ತಾಯಿಸಿದ್ದಾರೆ.

Leave a Reply

Your email address will not be published.