ಉಪಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ…ಯಾವ ಯಾವ ರಾಜ್ಯಗಳಲ್ಲಿ ಕೈ ಮುನ್ನಡೆ…ಇಲ್ಲಿದೆ ಡೀಟೆಲ್ಸ್..

ದೆಹಲಿ : ಬಿಜೆಪಿ ಪಕ್ಷಕ್ಕೆ ಪ್ರಾದೇಶಿಕ ಮತ್ತು ಕಾಂಗ್ರೆಸ್ ಪಕ್ಷಗಳು ಸೆಡ್ಡು ಹೊಡೆದಿದ್ದು,  ಒಟ್ಟು 14 ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ಮುನ್ನಡೆ ಸಾಧಿಸಿವೆ. ಬಿಜೆಪಿ ಈಗಾಗಲೇ 9 ಕ್ಷೇತ್ರಗಳಲ್ಲಿ ಹಿನ್ನಡೆ ಸಾಧಿಸಿದೆ.

ಮುಂಬರುವ  ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕಾಂಗ್ರೆಸ್ ಮತ್ತು  ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಾಗಿದ್ದು, ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷವು ಈಗಾಗಲೇ ಮೇಘಾಲಯ ಮತ್ತು ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸಿದ್ದು  ಇನ್ನಿತರ  ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳು ಮುನ್ನಡೆಯನ್ನು ಸಾಧಿಸಿವೆ.

ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಈಗ ನೇರ ಸ್ಪರ್ಧಿಯಾಗಿರುವುದರಿಂದ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತಿವೆ. ಈ ಉಪ ಚುನಾವಣಾ ಫಲಿತಾಂಶವು ಮುಂಬರುವ ಚುನಾವಣೆಗೆ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಇದೇ 28ರಂದು ಮಹಾರಾಷ್ಟ್ರದ ಪಲ್ಘಾರ್‌ ಮತ್ತು ಭಂದಾರಾ-ಗೋಂಡಿಯಾ, ಉತ್ತರ ಪ್ರದೇಶದ ಕೈರಾನ, ನಾಗಾಲ್ಯಾಂಡ್‌ನ ಲೋಕಸಭಾ ಕ್ಷೇತ್ರ ಮತ್ತು ವಿಧಾನಸಭಾ ಕ್ಷೇತ್ರಗಳಾದ ಮಹಾರಾಷ್ಟ್ರದ ಪಲುಸ್ ಕಡೆಗಾಂವ್, ಉತ್ತರ ಪ್ರದೇಶದ ನೂರ್ಪುರ್‌, ಬಿಹಾರದ ಜೋಖಿತ್‌, ಜಾರ್ಖಂಡ್‌ನ ಗೊಮಿಯ ಮತ್ತು ಸಿಲ್ಲಿ, ಕೇರಳದ ಚೆಂಗಣ್ಣೂರು, ಮೇಘಾಲಯದ ಅಂಪತಿ, ಪಂಜಾಬ್‌ನ ಶಹಕೋಟ್, ಉತ್ತರಾಖಂಡದ ಥಾರಲಿ ಮತ್ತು ಪಶ್ಚಿಮ ಬಂಗಾಳದ ಮಹೇಶ್ತಲಾನಲ್ಲಿ ಮತದಾನ ನಡೆದಿತ್ತು.

ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮತ ಎಣಿಕೆ ಕಾರ್ಯ ಸಾಗುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಉಪಚುನಾವಣೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಬಾರಿಯ ಉಪ ಚುನಾವಣೆಯಲ್ಲೂ ಬಿಜೆಪಿ ಮುಖಭಂಗ ಅನುಭವಿಸಿದೆ.

ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಪಡೆಯುವುದರೊಂದಿಗೆ ಪ್ರಾಬಲ್ಯ ಮೆರೆದಿದೆ. ಉಪ ಚುನಾವಣೆಗಳಲ್ಲಿನ ಬಿಜೆಪಿ ಸೋಲು ಮುಂದಿನ ಚುನಾವಣೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ, ಹಿನ್ನಡೆ ?

ಲೋಕಸಭಾ ಕ್ಷೇತ್ರಗಳು                                      ಮುನ್ನಡೆ/ಜಯ                                      ಹಿನ್ನಡೆ/ ಸೋಲು
ಪಲ್ವಾರ್ (ಮಹಾರಾಷ್ಟ್ರ)                                     ಬಿಜೆಪಿ -ಗೆಲುವು                                         ಶಿವಸೇನೆ
ಭಂದಾರಾ -ಗೋಂಡಿಯಾ (ಮಹಾರಾಷ್ಟ್ರ)             ಎನ್‌ಸಿಪಿ                                                   ಬಿಜೆಪಿ
ಕೈರಾನಾ (ಉತ್ತರ ಪ್ರದೇಶ)                               ಆರ್‌ಎಲ್‌ಡಿ-ಗೆಲುವು                                    ಬಿಜೆಪಿ
ನಾಗಾಲ್ಯಾಂಡ್                                                 ಬಿಜೆಪಿ -ಎನ್‌ಡಿಪಿಪಿ ಮೈತ್ರಿ                         ಎನ್‌ಪಿಎಫ್‌
ವಿಧಾನಸಭಾ ಕ್ಷೇತ್ರಗಳು                                         ಮುನ್ನಡೆ /ಗೆಲುವು
ಪಲುಸ್‌ ಕಡೆಗಾಂವ್‌ (ಮಹಾರಾಷ್ಟ್ರ)                         ಕಾಂಗ್ರೆಸ್‌ – ಗೆಲುವು
ನೂರ್ಪುರ (ಉತ್ತರ ಪ್ರದೇಶ)                                   ಸಮಾಜವಾದಿ ಪಕ್ಷ – ಜಯ
ಜೋಖಿತ್‌ (ಬಿಹಾರ)                                              ಆರ್‌‌ಜೆಡಿ – ಗೆಲುವು
ಗೊಮಿಯ (ಜಾರ್ಖಂಡ್‌)                                         ಜೆಎಂಎಂ – ಜಯ
ಸಿಲ್ಲಿ  (ಜಾರ್ಖಂಡ್‌)                                                ಜೆಎಂಎಂ – ಜಯ
ಚೆಂಗಣ್ಣೂರು (ಕೇರಳ)                                            ಸಿಪಿಐ – ಗೆಲುವು
ಅಂಪತಿ (ಮೇಘಾಲಯ)                                          ಕಾಂಗ್ರೆಸ್‌  – ಜಯ
ಶಹಕೋಟ್ (ಪಂಜಾಬ್‌)                                         ಕಾಂಗ್ರೆಸ್‌ – ಜಯ
ಥಾರಲಿ (ಉತ್ತರಾಖಂಡ್‌)                                        ಬಿಜೆಪಿ – ಗೆಲುವು
ಮಹೇಶ್ತಲಾ (ಪಶ್ಚಿಮ ಬಂಗಾಳ)                               ತೃಣಮೂಲ ಕಾಂಗ್ರೆಸ್‌

Leave a Reply

Your email address will not be published.