ಡಿಕೆ ಬ್ರದರ್ಸ್‌ಗೆ ಸಂಕಷ್ಟ : ಕಾಂಗ್ರೆಸ್‌ ಟ್ರಬಲ್‌ ಶೂಟರ್‌ನ ಬಗ್ಗು ಬಡಿಯಲು ಮೋದಿ-ಶಾ ಪ್ಲ್ಯಾನ್‌ !

ಬೆಂಗಳೂರು : ಕಾಂಗ್ರೆಸ್‌ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆನಿಲ್ಲಲು ಶ್ರಮಿಸಿದ್ದ ಡಿ.ಕೆ ಬ್ರದರ್ಸ್‌ರನ್ನು ಮಣಿಸಲು ಮೋದಿ, ಶಾ  ಪ್ಲ್ಯಾನ್ ಮಾಡಿದ್ದಾರೆ. ಈ ಕುರಿತು ಡಿಕೆ ಬ್ರದರ್ಸ್‌ಗೆ ಸುಳಿವು ಸಿಕ್ಕಿದ್ದು, ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ.
ಮೋದಿ ಹಾಗೂ ಅಮಿತ್ ಶಾ ನಮ್ಮ ವಿರುದ್ದ ಸೇಡು ತೀರಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದು, ನಮ್ಮ 11 ಮಂದಿ ವಿರುದ್ಧ ಸಿಬಿಐ ಸರ್ಚ್‌ ವಾರೆಂಟ್‌ ಹೊರಡಿಸಿದೆ ಎಂದು ಕಾಂಗ್ರೆಸ್‌ ನಾಯಕರಾದ ಡಿಕೆ ಬ್ರದರ್ಸ್‌ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಗುರುವಾರ ಬೆಳಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ ಸುರೇಶ್‌ ಹಾಗೂ ಡಿ.ಕೆ ಶಿವಕುಮಾರ್, ಮೋದಿ ಮತ್ತು ಅಮಿತ್  ಶಾ ಸೇಡಿನ ರಾಜಕಾರಣ ಮಾಡುತ್ತಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ನಮ್ಮ 11 ಜನರ ಮೇಲೆ ಸಿಬಿಐ,ಇಡಿ ಮತ್ತು ಐಟಿ  ಮೂಲಕ ಕೇಸ್‌ ದಾಖಲಿಸಿ ಸರ್ಚ್‌ ವಾರೆಂಟ್‌ ಜಾರಿ ಮಾಡಿರುವುದಾಗಿ ಹೇಳಿದ್ದಾರೆ.
ಮೂರು ನಾಲ್ಕು ತಿಂಗಳುಗಳಿಂದ ಅನೇಕ ಮಾಹಿತಿಗಳು ನಮಗೆ ಸಿಕ್ಕಿವೆ. ಎಲ್ಲೆಲ್ಲಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂಬುದೂ ತಿಳಿದಿದೆ ಎಂಬ ಮಾಹಿತಿ ಹೊರಹಾಕಿದ್ದಾರೆ.
ಆದರೆ ಮೋದಿ, ಶಾ ಆಟಕ್ಕೆ ನಾವು ಜಗ್ಗುವವರಲ್ಲ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ. ನಾವು ಎಂದು ತಪ್ಪು ಮಾಡಿದವರಲ್ಲ, ಕಾನೂನು ಮೀರಿ ರಾಜಕಾರಣ ಮಾಡಿದವರಲ್ಲ, ಅಕ್ರಮಗಳನ್ನು ಮಾಡಿಲ್ಲ. ಸುಳ್ಳು ಕೇಸ್‌ ದಾಖಲಿಸಿ ನಮ್ಮ ಧ್ವನಿ ಅಡಗಿಸಬಹುದು ಎಂದುಕೊಂಡರೆ ಅದು ನಿಮ್ಮ ಭ್ರಮೆ  ಎಂದಿದ್ದಾರೆ. ಹುಟ್ಟುಸಾವಿನ ನಡುವೆ ಏನು ಬೇಕಾದರೂ ಆಗಬಹುದು. ನಮ್ಮ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾಗಬಹುದು. ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ. ಅಧಿಕಾರ ಸೇರಿದಂತೆ ಯಾವುದೂ ಶಾಶ್ವತ ಅಲ್ಲ. ಸೇಡಿನ ರಾಜಕಾರಣ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com