ಇನ್ಮುಂದೆ ನನ್ನ ಎಕ್ಕಡಾನು ಎಚ್‌ಡಿಕೆ ಮನೆಗೆ ಕಾಲಿಡಲ್ಲ ಎಂದ ಹುಚ್ಚ ವೆಂಕಟ್‌ !

ಬೆಂಗಳೂರು : ನಟ ಹುಚ್ಚ ವೆಂಕಟ್‌  ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡುವ ಸಲುವಾಗಿ ಅವರ ಮನೆಗೆ ತೆರಳಿದ್ದು, ಮುಖ್ಯಮಂತ್ರಿಗಳ ಆಪ್ತ ಸಹಾಯಕರು ಭೇಟಿಗೆ ಅವಕಾಶ ನೀಡದೆ ವಾಪಸ್‌ ಕಳಿಸಿದ ಸಂಗತಿ ನಡೆದಿದೆ.

ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದಿರುವ ಹುಚ್ಚ ವೆಂಕಟ್‌, ರೈತರ ಸಾಲಮನ್ನಾ ವಿಚಾರ ಸಂಬಂಧ ಸಿಎಂ ಅವರನ್ನು ಭೇಟಿಯಾಗಲು ಬಂದಿದ್ದೆ. ಆದರೆ ನನಗೆ ಅವಕಾಶ ನೀಡದೆ ವಾಪಸ್‌ ಕಳಿಸಿದ್ದಾರೆ. ಇದರಿಂದ ನಿಜಕ್ಕೂ ಸಿಟ್ಟು ಬಂದಿದೆ. ರೈತರ ಸಾಲಮನ್ನಾ ಮಾಡದಿದ್ದರೆ ಬಿಡುವುದಿಲ್ಲ ಎಂದಿದ್ದಾರೆ.

ಸಾಲಮನ್ನಾ ಮಾಡಲು ಬೇಕಾದರೆ ಸ್ವಲ್ಪ ಸಮಯ ತೆಗೆದುಕೊಳ್ಳಲಿ. ಆದರೆ ಸಾಲಮನ್ನಾ ಮಾಡಲೇಬೇಕು. ನನಗೆ ಅವಮಾನ ಮಾಡಿದ ಸಿಎಂ ಮನೆಗೆ ಇನ್ಮುಂದೆ ನನ್ನ ಎಕ್ಕಡನೂ ಕಾಲಿಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com