2 ಸಲ ಸಿಎಂ ಆಗಿದ್ದೀಯ,ನಿಂಗೆ ಅನುಭವ ಇದೆ,ಸುಮ್ಮನೆ ಸಾಲಮನ್ನಾ ಮಾಡು : HDKಗೆ ಏಕವಚನದಲ್ಲೇ ಬೈದ ಶ್ರೀರಾಮುಲು

ಬಳ್ಳಾರಿ :  ನೀನು ಎರಡು ಬಾರಿ ಮುಖ್ಯಮಂತ್ರಿ ಆಗೀದ್ದಿಯಾ.. ನಿನಗೆ ಅನುಭವ ಇದೆ, ಸುಮ್ಮನೆ ಸಾಲಮನ್ನಾ ಮಾಡು, ಜನರು ಇದೀಗ ಅಂದುಕೊಳ್ಳುತ್ತಿದ್ದಾರೆ ಸಿಎಂ ಕುಮಾರಸ್ವಾಮಿಗೆ ಎರಡು ನಾಲಿಗೆ ಇದೆ ಎಂದು ಏಕವಚನದಲ್ಲಿ ಶಾಸಕ ಶ್ರೀರಾಮುಲು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯ ತಮ್ಮ ನಿವಾಸದಲ್ಲಿಂದು ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ಖಾಸಗಿ ಕೇಸ್ ದಾಖಲು ವಿಚಾರವಾಗಿ ಮಾತನಾಡಿದ ಅವರು ಕಾನೂನಿನ ಮುಂದೆ ಎಲ್ಲರೂ ಸಮಾನರು,ಕಾನೂನಿನ ವಿರುದ್ಧ ಶ್ರೀರಾಮುಲು ಎಂದಿಗೂ ಹೋಗಲ್ಲ. ನಾನೂ ಯಾವುದೇ ತಪ್ಪು ಮಾಡಿಲ್ಲ, ಕಾನೂನು ಕ್ರಮಕ್ಕೆ ತಲೆಬಾಗುತ್ತೇನೆ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪಕ್ಷದವರ ಮೇಲೆ ಬಿಜೆಪಿ ಸಿಬಿಐ, ಐಟಿ ಅಧಿಕಾರಿಗಳನ್ನು ಛೂ ಬಿಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಮೇಲೆ ಐಟಿ ದಾಳಿ ಆಗಿದೆ ಎಂದು ಕೇಂದ್ರ ಸರ್ಕಾರದ ಮೇಲೆ ಯಾಕೆ ಗೂಬೆ ಕೂರಿಸುತ್ತೀರ. ಯುಪಿಎ ಸರ್ಕಾರ ಇದ್ದಾಗ ಎಷ್ಟು ಜನರ ಮೇಲೆ ಐಟಿ, ಸಿಬಿಐ ದಾಳಿ ಆಗಿದೆ. ನನ್ನ ಸ್ನೇಹಿತ ಜನಾರ್ದನ ರೆಡ್ಡಿ ಮೇಲೆ ಸಿಬಿಐ ದಾಳಿ ಆಗಿಲ್ವಾ.‌ ಅವರಿಗೆ ಕಿರುಕುಳ ನೀಡಿಲ್ಲಾ ಎಂದು ಪ್ರಶ್ನಿಸಿದ್ದಾರೆ.

One thought on “2 ಸಲ ಸಿಎಂ ಆಗಿದ್ದೀಯ,ನಿಂಗೆ ಅನುಭವ ಇದೆ,ಸುಮ್ಮನೆ ಸಾಲಮನ್ನಾ ಮಾಡು : HDKಗೆ ಏಕವಚನದಲ್ಲೇ ಬೈದ ಶ್ರೀರಾಮುಲು

  • May 31, 2018 at 8:36 PM
    Permalink

    BJP MODI WAST

    Reply

Leave a Reply

Your email address will not be published.

Social Media Auto Publish Powered By : XYZScripts.com