ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲಿಗೆ ಸಿಕ್ಕಿದೆ ಮುನ್ಸೂಚನೆ…..ಏನದು ?

ಬೆಂಗಳೂರು : ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು,  2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಲುತ್ತಾರೆ. ಈಗಾಗಲೆ ಅದರ ಮುನ್ಸೂಚನೆ ಸಿಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಆರ್‌.ಆರ್‌ ನಗರದಲ್ಲಿ ಮುನಿರತ್ನ ಗೆದ್ದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದೇಶದ ಅನೇಕ ಭಾಗಗಳಲ್ಲಿ ಲೋಕಸಭಾ ಉಪಚುನಾವಣೆ ನಡೆಯುತ್ತಿದ್ದು, ಮೋದಿ ವಿರೋಧಿ ಅಲೆ ಕೆಲಸ ಮಾಡುತ್ತಿದೆ. ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ಇದು ಮೋದಿಗೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಇದೇ ವೇಳೆ ಆರ್‌ಆರ್‌ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ಗೆಲುವು ನಿರೀಕ್ಷಿತ. ವಿಧಾನಸಭೆಗೆ ನಿಗದಿಪಡಿಸಿದ್ದ ಚುನಾವಣಾ ದಿನಾಂಕದಂದು ಆರ್‌ಆರ್‌ ನಗರದಲ್ಲೂ ಚುನಾವಣೆ ನಡೆದಿದ್ದರೆ, ಇದೇ ಫಲಿತಾಂಶ ಬರುತ್ತಿತ್ತು ಎಂದಿದ್ದಾರೆ.

Leave a Reply

Your email address will not be published.