ಪುಣ್ಯಾತ್ಮ ರಾಹುಲ್‌ ಗಾಂಧಿ ನನಗೆ ಸರ್ಕಾರ ರಚನೆಯ ಅವಕಾಶ ಮಾಡಿಕೊಟ್ಟಿದ್ದಾರೆ ಎಂದ HDK !!!

ಬೆಂಗಳೂರು :  ಸರ್ಕಾರ ರಚನೆ ಮಾಡಲು ನನಗೆ ಜನ ಆಶಿರ್ವಾದ ಮಾಡಲಿಲ್ಲ. ಆದರೆ ಪುಣ್ಯಾತ್ಮ ರಾಹುಲ್‌ ಗಾಂಧಿ ನನಗೆ  ಸರ್ಕಾರ ರಚನೆಯ ಅವಕಾಶ  ಕೊಟ್ಟಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ರಾಹುಲ್‌ರನ್ನು ಹೊಗಳಿದ್ದಾರೆ.
ಬುಧವಾರ ಸಾಲಮನ್ನಾ ವಿಚಾರವಾಗಿ ರೈತ ಸಂಘಟನೆಯ ಮುಖಂಡರು ಹಾಗೂ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಕುಮಾರಸ್ವಾಮಿ, ರಾಹುಲ್‌ ಗಾಂಧಿ ಪುಣ್ಯಾತ್ಮ, ನನನಗೆ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು. ನಾನೊಬ್ಬನೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
 
ರೈತರಿಗೆ ನೆಮ್ಮದಿ ಮೂಡಿಸುವ ಕೆಲಸ ಮಾಡಲು ನನಗೊಂದು ಅವಕಾಶ ಸಿಕ್ಕಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ನನಗೂ ರಾಜಕೀಯ ಮಾಡಲು ಗೊತ್ತಿದೆ. ರೈತರ ಸಾಲಮನ್ನಾ ಮಾಡೇ ಮಾಡುತ್ತೇನೆ ಎಂದು ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com