ಕಾಂಗ್ರೆಸ್‌ ಪಾಲಿಗೆ ಮತ್ತೊಮ್ಮೆ ‘ಹೀರೋ’ ಆದ ಡಿಕೆಶಿ : ಸರಿಯಾಗಿಯೇ ಸಿಕ್ಕಿಹಾಕಿಕೊಂಡ ಅಮಿತ್ ಶಾ !!

ಬೆಂಗಳೂರು : ಗುಜರಾತ್‌ ಶಾಸಕರಿಗೆ ಕರ್ನಾಟಕದ ರೆಸಾರ್ಟ್‌ನಲ್ಲಿ ರಕ್ಷಣೆ ನೀಡಿದ್ದ ಕಾಂಗ್ರೆಸ್‌ನ ಟ್ರಬಲ್‌ ಶೂಟರ್ ಡಿಕೆಶಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆಮಿಷ ಒಡ್ಡಿದ್ದರು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ವಿಧಾನಪರಿಷತ್‌ ಸದಸ್ಯ ಸಿ.ಎಂ ಲಿಂಗಪ್ಪ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಗುಜರಾತ್‌ನಲ್ಲಿ ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಶಾಸಕರನ್ನು ಉಳಿಸಿಕೊಳ್ಳಲು ಕರ್ನಾಟಕ ಸೂಕ್ತವೆಂದು ತಿಳಿದು ಎಲ್ಲಾ ಶಾಸಕರನ್ನು ಕರ್ನಾಟಕಕ್ಕೆ ಕಳಿಸಿತ್ತು. ಈ ವೇಳೆ ಡಿಕೆಶಿ ಎಲ್ಲಾ ನಾಯಕರನ್ನು ಈಗಲ್‌ಟನ್ ರೆಸಾರ್ಟ್‌ನಲ್ಲಿ ಹದ್ದಿನ ಕಣ್ಣಿಟ್ಟು ಕಾದಿದ್ದರು.

ಇದೇ ಸಂದರ್ಭದಲ್ಲಿ ಡಿಕೆಶಿಯವರಿಗೆ ಅಮಿತ್ ಶಾ ಕರೆ ಮಾಡಿದ್ದು, ಕಾಂಗ್ರೆಸ್‌ನ ನಾಲ್ಕು ಶಾಸಕರನ್ನು ತಮಗೆ ಒಪ್ಪಿಸುವಂತೆ ಕೇಳಿದ್ದು, ಅದಕ್ಕೆ ಪ್ರತಿಯಾಗಿ ದೊಡ್ಡ ಸಹಾಯ ಮಾಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಈ ವೇಳೆ ತಾನು ಡಿಕೆಶಿ ಪಕ್ಕದಲ್ಲೇ ಇದ್ದುದ್ದಾಗಿ ಲಿಂಗಪ್ಪ ಹೇಳಿದ್ದಾರೆ.

ಅಮಿತ್ ಶಾ ಹಿಂದಿಯಲ್ಲಿ ಮಾತನಾಡುತ್ತಿದ್ದರೆ ಡಿಕೆಶಿ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದರು. 38 ಮಂದಿ ಶಾಸಕರನ್ನು ನೀವೇ ಇಟ್ಟುಕೊಳ್ಳಿ. ನಮಗೆ ನಾಲ್ಕು ಮಂದಿ ಶಾಸಕರನ್ನು ಕೊಡಿ. ಇದಕ್ಕೆ ಪ್ರತಿಫಲವಾಗಿ ನಾನು ಸಹಾಯ ಮಾಡುತ್ತೇನೆ ಎಂದು ಶಾ ಹೇಳಿದ್ದರು. ಆದರೆ ಡಿಕೆಶಿ ಇದಕ್ಕೆ ಒಪ್ಪಿರಲಿಲ್ಲ. ನಾನು ಎಂದಿಗೂ ಕಾಂಗ್ರೆಸ್ ನವನೇ. ನನ್ನ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ ಎಂದು ಅಮಿತ್ ಶಾ ನೀಡಿದ್ದ ಆಫರನ್ನು ತಿರಸ್ಕರಿಸಿದ್ದರು. ಆದರೆ ಬಿಜೆಪಿಯವರು ಯಾರನ್ನು ಯಾವ ಸಂದರ್ಭದಲ್ಲಿ ಹೊತ್ತೊಯ್ಯುತ್ತಿದ್ದರು ಎಂಬುದು ಗೊತ್ತಿರಲಿಲ್ಲ. ಆದರೆ ಈ ಮಾಹಿತಿ ಬಹಿರಂಗಪಡಿಸಲು ಇದುವರೆಗೂ ಸಮಯ ಬಂದಿರಲಿಲ್ಲ ಎಂದು ಲಿಂಗಪ್ಪ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com