ಖಿನ್ನತೆಯಿಂದಾಗಿ ಮಗನನ್ನು ಕೊಂದ ನಿರೂಪಕ ಚಂದನ್‌ ಪತ್ನಿ… ಬಳಿಕ ಮಾಡಿದ್ದೇನು….?

ಬೆಂಗಳೂರು : ಇತ್ತೀಚೆಗಷ್ಟೇ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಕನ್ನಡ ಕಿರುತೆರೆ ನಿರೂಪಕ ಚಂದನ್ ಸಾವಿನಿಂದ ಮನನೊಂದ ಪತ್ನಿ ಮೀನಾ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿರುವ ಮನೆಯಲ್ಲಿ ಚಂದನ್‌ ಪತ್ನಿ ಮೀನಾ ತಮ್ಮ 13 ವರ್ಷ ಮಗ ತುಷಾರ್‌ನ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಬಳಿಕ ತಾವೂ ಆ್ಯಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ತುಷಾರ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಮೀನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಂದನ್‌ ಪತ್ನಿ ತೀವ್ರವಾಗಿ ಅಸ್ವಸ್ಥರಾಗಿದ್ದು ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.
ಒಂದು ವಾರದ ಹಿಂದಷ್ಟೇ ನಿರೂಪಕ ಚಂದನ್‌ ತನ್ನ ಸ್ನೇಹಿತರ ಜೊತೆ ಹುಬ್ಬಳ್ಳಿಗೆ ಹೋಗುವಾಗ ದಾವಣಗೆರೆ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

10 thoughts on “ಖಿನ್ನತೆಯಿಂದಾಗಿ ಮಗನನ್ನು ಕೊಂದ ನಿರೂಪಕ ಚಂದನ್‌ ಪತ್ನಿ… ಬಳಿಕ ಮಾಡಿದ್ದೇನು….?

Leave a Reply

Your email address will not be published.

Social Media Auto Publish Powered By : XYZScripts.com