ಮೈತ್ರಿ ಸರ್ಕಾರ ಪತನಕ್ಕೆ ಶಾ ತಂತ್ರ : ಬಿಜೆಪಿ ಗಾಳಕ್ಕೆ ಸಿಕ್ಕಿಬೀಳುವರೇ ಡಿಕೆಶಿ, ಸಿದ್ದರಾಮಯ್ಯ?

ಕಾಂಗ್ರೆಸ್‌ ನಾಯಕ ಡಿ.ಕೆ ಶಿವಕುಮಾರ್‌ ಮೇಲೆ ದೇಶದ ನಾಯಕರೆಲ್ಲ ತಿರುಗಿ ನೋಡುವಂತಾಗಿದೆ. ಇಂದು ಡಿಕೆಶಿ ಹಾಗೂ ಅವರ ಆಪ್ತರ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸುತ್ತಿರುವುದು, ಬಿಜೆಪಿ ನಾಯಕರು ಶಿವಕುಮಾರ್ ಮೇಲೆ ಆರೋಪ ಹೊರಿಸುತ್ತಿರುವುದನ್ನು ನೋಡಿದರೆ ಡಿಕೆಶಿಯನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ.

ಮತ್ತೊಂದೆಡೆ ಇಷ್ಟು ದಿನ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟುತ್ತಿದ್ದ ಬಿಜೆಪಿ ನಾಯಕರೆಲ್ಲ ಈಗ ಅವರ ಪರ ಮಾತಾಡುತ್ತಿದ್ದು, ಜೆಡಿಎಸ್‌ ವಿರುದ್ಧ ಟೊಂಕಕಟ್ಟಿ ನಿಲ್ಲುತ್ತಿದ್ದಾರೆ. ಕರ್ನಾಟಕದಲ್ಲಿ ಸದ್ಯಕ್ಕೆ ಹೆಚ್ಚು ಖ್ಯಾತರಾಗಿರುವ ಮಾಸ್‌ ಲೀಡರ್‌ಗಳು ಡಿಕೆಶಿ ಹಾಗೂ ಶಿವಕುಮಾರ್‌ ಮಾತ್ರ.

ಸಿದ್ದರಾಮಯ್ಯನವರ ಜನಪರ ಕೆಲಸ, ಸಮಾಜವಾದಿ ನಿಲುವು, ಆಡಳಿತದ ವೈಖರಿಯನ್ನು ನೋಡಿರುವ ಕಾಂಗ್ರೆಸ್‌ ಹೈಕಮಾಂಡ್‌ ಮೋದಿ ವಿರುದ್ದ ಕಣಕ್ಕಿಳಿಸುತ್ತಿದೆ. ಎಐಸಿಸಿಯಲ್ಲೂ ಸಿದ್ದರಾಮಯ್ಯ, ಡಿಕೆಶಿಯಂತಹ ಘಟಾನುಘಟಿ ನಾಯಕರು ಇಲ್ಲದ ಕಾರಣ ಮೋದಿಗೆ ಟಕ್ಕರ್‌ ಕೊಡಲು ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳಲಾಗುತ್ತಿದೆ.

ಮತ್ತೊಂದೆಡೆ ಕಾಂಗ್ರೆಸ್‌ಗೆ ಕರ್ನಾಟಕವನ್ನು ತೆಕ್ಕೆಗೆ ಹಾಕಿಕೊಳ್ಳಲು ಡಿಕೆಶಿಯಂತಹ ವ್ಯಕ್ತಿಯ ಅಗತ್ಯವಿದ್ದು, ಕಾಂಗ್ರೆಸ್‌ ಪಕ್ಷವನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಇವರಿಬ್ಬರ ಮೇಲೆ ಮೋದಿ-ಶಾ ಕಣ್ಣಿಟ್ಟಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯ ರಾಜಕಾರಣಕ್ಕೆ ಸಲ್ಲುವಂತಹ ಇವರಿಬ್ಬರನ್ನು ಬಿಜೆಪಿ ತೆಕ್ಕೆಗೆ ಎಳೆದುಕೊಂಡರೆ ಸಾಕು ಕಾಂಗ್ರೆಸ್ ಮುಕ್ತ ದೇಶವಾಗುವಲ್ಲಿ ತಮ್ಮ ಹಾದಿ ಸುಗಮವಾಗಲಿದೆ ಎಂಬುದು ಬಿಜೆಪಿಗರ ಲೆಕ್ಕಾಚಾರ.

ಮತ್ತೊಂದೆಡೆ ಮೈತ್ರಿ ಸರ್ಕಾರ ಬಿದ್ದುಹೋಗುವುದನ್ನೇ ಕಾಯುತ್ತಿರುವ ಬಿಜೆಪಿ ಏನಾದರೂ ಮಾಡಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿಕೆಶಿಯ ಹೆಡೆಮುರಿಕಟ್ಟುವ ಆಲೋಚನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಏಕೆಂದರೆ ಶಿವಕುಮಾರ್ ಆಪ್ತರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಪಡೆದಿದೆ. ಇಂಥದ್ದಕ್ಕೆ ನಾನು ಹೆದರಲ್ಲ ಅಂದಿದ್ದಾರೆ ಡಿಕೆಶಿ. ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಶಿವಕುಮಾರ್ ಜತೆಗಿದ್ದರು. ಈಗ ಪಕ್ಷ ಅವರ ಜತೆ ಇರುತ್ತದೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡರು ಹೇಳಿದ್ದಾರೆ. ಕರ್ನಾಟಕದ ನಾಯಕರಿಬ್ಬರು ರಾಷ್ಟ್ರರಾಜಕೀಯ ನಾಯಕರ ನಿದ್ದೆ ಕೆಡಿಸಿರುವುದಂತೂ ಸುಳ್ಳಲ್ಲ. ಆದರೆ ಯಾರೇ ಏನೇ ಮಾಡಿದರೂ ಇಬ್ಬರೂ ಕಾಂಗ್ರೆಸ್‌ ಬಿಡುವುದಿಲ್ಲ ಎಂಬ ಮಾತು ರಾಜಕೀಯ  ವಲಯದಿಂದ ಕೇಳಿಬರುತ್ತಿದೆ.

One thought on “ಮೈತ್ರಿ ಸರ್ಕಾರ ಪತನಕ್ಕೆ ಶಾ ತಂತ್ರ : ಬಿಜೆಪಿ ಗಾಳಕ್ಕೆ ಸಿಕ್ಕಿಬೀಳುವರೇ ಡಿಕೆಶಿ, ಸಿದ್ದರಾಮಯ್ಯ?

Leave a Reply

Your email address will not be published.

Social Media Auto Publish Powered By : XYZScripts.com